ನೇಸರಗಿ. ಚಿತ್ರ ಕಲಾವಿದ ಆಜೀತನಾಥ ಹುಲಮನಿ ಅವರು ರಾಜ್ಯದ ಅನೇಕ ಪೂಜ್ಯ ಶ್ರೀಗಳ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಾಗೂ ನಿಸರ್ಗ ಸೌಂದರ್ಯವನ್ನು ಚಿತ್ರಿಸಿ ಅವುಗಳಿಗೆ ಜೀವ ತುಂಬಿ ಚಿತ್ರಕಲೆಯಲ್ಲಿ ಅಪಾರ ಸಾಧನೆ ಮಾಡಿದ್ದು ಅವರ ಚಿತ್ರಕಲೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯಲ್ಲಿ ಮತ್ತು ಅವರ ತಂದೆ ಶಿಕ್ಷಕ ದಿ. ಬಸವಣ್ಣೆಪ್ಪ ಹುಲಮನಿ ಅವರ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಿದ್ದು ಅವರಿಗೆ ಉಜ್ವಲ ಭವಿಷ್ಯ ಇದೆ ಎಂದು ನೇಸರಗಿ – ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಚಿತ್ರಕಲಾವಿದ ಅಜೀತನಾಥ ಹುಲಮನಿ ಅವರ 50 ನೇ ಜನ್ಮದಿನದ ಪ್ರಯುಕ್ತ ಸನ್ಮಾನಿಸಿ ಮಾತನಾಡಿ ಬೈಲಹೊಂಗಲದ ಚನ್ನಮ್ಮ ಸಮಾಧಿಯಲ್ಲಿ ಇವರ ಕಲೆ ಅನಾವರಗೊಂಡಿದೆ, ಸ್ವಾತಂತ್ರ್ಯ ಹೋರಾಟಗಾರ್ತಿ ತಾಯಿ ಚನ್ನಮ್ಮಾಜಿ ಕಲಾ ಚಿತ್ರ ಅದ್ಭುತವಾಗಿ ಮೂಡಿಬಂದಿದೆ,ದತ್ತವಾಡ ಮಹಾರಾಜ ಶ್ರೀ ಅದ್ರಶ್ಯ ಶಿವಯೋಗಿಗಳ ಭಾವಚಿತ್ರ ನೋಡುಗರ ಕಣ್ಣು ಸೆಳೆಯುತ್ತದೆ. ಮುಂದೆ ಅವರು ಉಜ್ವಲ ಭವಿಷ್ಯ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಯಿ ಗೌರಮ್ಮ ಹುಲಮನಿ, ಸಹೋದರ ಮಂಜುನಾಥ ಹುಲಮನಿ, ಶಿವನಗೌಡ ಪಾಟೀಲ,ಡಾ. ಗಂಗಾಧರ ಕಾರಾoವಿ,ಶಂಕರ ತಿಗಡಿ,ಉದಯಕುಮಾರ ಜೋಕಿ, ದುಂಡಪ್ಪ ಬಂದಿವಡ್ಡರ, ಬಸವರಾಜ ತಿಗಡಿ, ಜಗದೀಶ ಗೆಜ್ಜಿ, ಪ್ರಕಾಶ ಅರಕಸಾಲಿ, ಗುರು ತುಬಚಿ,ಬಸವಂತ ಸೋಮಣ್ಣವರ, ಕುಮಾರ ಪಾಟೀಲ, ನಾಗರಾಜ್ ತುಬಾಕಿ, ಈಶ್ವರ ಚೋಭಾರಿ, ಅಶೋಕ ಹತ್ತರಗಿ,ವಿಶ್ವನಾಥ ಕೂಲಿನವರ, ಪ್ರಕಾಶ ಮುಂಗರವಾಡಿ,ಮಹಾಂತೇಶ ಚಿಲಾಪುರೆ, ರಾಜು ಅರಿಕೇರಿ, ಮಹಾಂತೇಶ ಸತ್ತಿಗೇರಿ, ಶ್ರೀಕಾಂತ ತರಗಾರ, ಮಲ್ಲಿಕಾರ್ಜುನ ಮುತವಾಡ ,ಪ್ರಕಾಶ ಅಂಗಡಿ, ದೇವಪ್ಪ ಚಿಕಣಿ, ರವಿ ಉಪಾಧ್ಯ, ಶ್ರೀಮತಿ ಬಾಳವ್ವ ಶಿಂತ್ರಿ, ಅಕ್ಷಯ ಕೆಂಪಣ್ಣವರ,ಶ್ರೀಮತಿ ಶಕುಂತಲಾ ಹುಲಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.