ಬಿಜೆಪಿಯ ಸಂಘಟನೆಯ ಮಾದರಿಯಲ್ಲೇ ಪಕ್ಷ ಬಲಿಷ್ಠ ಕಾರ್ಯ: ಪದ್ಮರಾಜ್ ಆರ್.ಪೂಜಾರಿ

Ravi Talawar
ಬಿಜೆಪಿಯ ಸಂಘಟನೆಯ ಮಾದರಿಯಲ್ಲೇ ಪಕ್ಷ ಬಲಿಷ್ಠ ಕಾರ್ಯ: ಪದ್ಮರಾಜ್ ಆರ್.ಪೂಜಾರಿ
WhatsApp Group Join Now
Telegram Group Join Now

ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರನ್ನೂ ದೂಷಣೆ ಮಾಡುವುದಿಲ್ಲ. ಪಕ್ಷದ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ‌. ಆದರೆ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ. ಎಲ್ಲಾ ಬೂತ್‌ಗಳಿಗೆ ಹೋಗಿ ಮುಂದಿನ ಒಂದೂವರೆ ವರ್ಷದಲ್ಲೇ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತೇನೆ. ಒಳ್ಳೆಯ ಕೆಲಸ ಯಾರೂ ಮಾಡಿದರೂ ಅನುಕರಿಸಡಬೇಕು. ಆದ್ದರಿಂದ ಬಿಜೆಪಿಯ ಸಂಘಟನೆಯ ಮಾದರಿಯಲ್ಲೇ ಪಕ್ಷ ಬಲಿಷ್ಠಗೊಳಿಸುಲ ಕಾರ್ಯ ಮಾಡುತ್ತೇನೆ ಎಂದು ದಕ್ಷಿಣ ಕ‌ನ್ನಡ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಿಗೆ ಹೋಗಿ ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗದಿರುವುದೇ ತನಗೆ ಮತ ಕಡಿಮೆಯಾಗಲು ಕಾರಣ. ನಾನು ಸೋತರೂ ರಾಷ್ಟ್ರಮಟ್ಟದ ನಾಯಕರು ನನಗೆ ಕರೆ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಸ್ವಲ್ಪ ದುರ್ಬಲವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಸಂಘಟಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

ನೂತನ ಸಂಸದ ಬ್ರಿಜೇಶ್ ಚೌಟ ಅವರಿಗೆ ಹೇಳುವುದೇನೆಂದರೆ, ತಾವು ಜಿಲ್ಲೆಯ ಅಭಿವೃದ್ಧಿಗೋಸ್ಕರ ಏನೇ ಕೆಲಸ ಮಾಡಿದರೂ ನಿಮ್ಮೊಂದಿಗಿರುತ್ತೇನೆ. ಅದರೊಂದಿಗೆ ಜಿಲ್ಲೆಯ ಸಾಮರಸ್ಯ ಗತವೈಭವವನ್ನು ಮರಳಿ ತರುವಲ್ಲಿಯೂ ತಮ್ಮ ಸಹಕಾರ ಅಗತ್ಯ ಎಂದು ಹೇಳಿದರು

WhatsApp Group Join Now
Telegram Group Join Now
Share This Article