ಬಳ್ಳಾರಿ,ಜು.೦5 ನಗರದ ೨೩ನೇ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಸದಸ್ಯ ಪಿ. ಗಾದೆಪ್ಪ ಅಧ್ಯಕ್ಷತೆಯಲ್ಲಿ ಜನ ಆರೋಗ್ಯ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.
ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಭಾಪತಿಗಳಾದ ಪಿ.ಗಾದೆಪ್ಪ ಮಾತನಾಡಿ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಪ್ರತಿ ತಿಂಗಳ ಕೊನೆ ದಿನ ಸಭೆ ನಡೆಸಲು ಜನ ಆರೋಗ್ಯ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿ ಮುಂದಾಗಬೇಕು ಎಂದು ತಿಳಿಸಿದರು.
ನಮ್ಮ ಕ್ಲಿನಿಕ್ ಗೆ ನಗರ ಪ್ರದೇಶದಿಂದ ಅತ್ಯಂತ ಕಡು ಬಡ ರೋಗಿಗಳು ಬರುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ, ಗರ್ಭಿಣಿಯರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮನೆಯವರೆಂದು ಭಾವಿಸಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವಂತೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ನಿಯಂತ್ರಣಧಿಕಾರಿಗಳಾದ ಡಾ. ವೀರೇಂದ್ರ ಕುಮಾರ್ , ಹಿರಿಯ ದಲಿತ ಸಾಹಿತಿ ಎನ್.ಡಿ ವೆಂಕಮ್ಮ , ಶಾಲಾ ಮುಖ್ಯ ಶಿಕ್ಷಕಿ ಎರ್ರೆಮ್ಮ .ಪಿ , ಸಹ ಶಿಕ್ಷಕರುಗಳಾದ ಹೆಚ್. ನಾಗರಾಜ್ , ಸಿದ್ದಲಿಂಗಮ್ಮ.ಎಲ್ , ಎಂ .ಪ್ರಮೀಳಾ ಬಾಯಿ , ಅನಿತಾ ಹೆಚ್.ವೈ , ನಗರ ಮುಖಂಡರುಗಳಾದ ಸಿಂಧೂರ ಲಕ್ಷ್ಮಣ್ , ಮೋಹನ್ ರಾಮ್ .ಕೆ , ಷಣ್ಮುಖ , ಲಕ್ಷ್ಮಣ. ಎಸ್ ಭಂಡಾರಿ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ಸಾತ್ವಿಕ್ , ನಮ್ಮ ಕ್ಲಿನಿಕ್ ಆಡಳಿತ ವೈದ್ಯಧಿಕಾರಿಗಳಾದ ಡಾ.ಎಂ. ಹನುಮೇಶ್ , ಸಿಪಿಎಂ ರುದ್ರಮ್ಮ , ಪಿಎಚ್‌ಸಿಒ ನಾಗಮಣಿ , ಎಂ ಎಲ್ ಡಬ್ಲ್ಯೂ ಎರಿಸ್ವಾಮಿ , ಶುಶ್ರೂಷಾಧಿಕಾರಿ ಉಮಾದೇವಿ , ಆರೋಗ್ಯ ನಿರೀಕ್ಷಣಾಧಿಕಾರಿ ಮಾಧವಿ.ಡಿ , ಸಹಾಯಕಿ ಪ್ರಿಯದರ್ಶಿನಿ.ಎಚ್ , ಅಂಗನವಾಡಿ ಕಾರ್ಯಕರ್ತರು , ಆಶಾ ಕಾರ್ಯಕರ್ತರು , ಇನ್ನು ಹಲವಾರು ನಗರ ಮಹಿಳೆಯರು ಉಪಸ್ಥಿತರಿದ್ದರು.