ಹುಕ್ಕೇರಿ, ಅ.5: ಹುಕ್ಕೇರಿ ತಾಲೂಕಿನ ಹೋಲ್ಲೊಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿದಿನ ನಡೆಯಬೇಕಾದ ಧ್ವಜಾರೋಹಣ ಕಾನೂನಿನ ಪ್ರಕಾರ ಬೆಳಗ್ಗೆ 6.00 ಗಂಟೆಗೆ ನೆರವೇರಬೇಕು ಎಂಬ ಸರಕಾರದ ನಿಬಂಧನೆ ಇದ್ದರೂ, ಸಿಬ್ಬಂದಿ ತಮ್ಮ ಇಚ್ಛೆ ಹಾಗೂ ಅನುಕೂಲತೆ ಪ್ರಕಾರ ಧ್ವಜ ಹಾರಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಅ.5 ರಂದು ಬೆಳಗ್ಗೆ 10.18 ಕ್ಕೆ ಧ್ವಜಾರೋಹಣ ನಡೆದಿದೆ. ಈ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ, ಪಂಚಾಯಿತಿ ಸಿಬ್ಬಂದಿಯೊಬ್ಬರು ಅಜಾಗರೂಕ ಉತ್ತರ ನೀಡಿ, “ಜರ್ಮನ್ ದೇಶದಲ್ಲಿ ಮುಖ್ಯಮಂತ್ರಿ ತೀರಿಕೊಂಡಿದ್ದಾರೆ, ಆದ್ದರಿಂದ ಲೇಟಾಗಿ ಧ್ವಜ ಹಾರಿಸಿದೆ,” ಎಂದು ಹೇಳಿರುತ್ತಾರೆ
ಸ್ವತಂತ್ರ ದಿನಾಚರಣೆ ಮುನ್ನವೇ ಈ ರೀತಿ ಧ್ವಜಕ್ಕೆ ಅಪಮಾನ ಮಾಡಿದವರಿಗೆ ಅವರ ಹುದ್ದೆಯಲ್ಲಿ ಇರುವುದು ಎಷ್ಟು ಸರಿ ಭಾರತ ಮಾತೆಯ ಧ್ವಜಕ್ಕೆ ಗೌರವವನ್ನು ಇಟ್ಟಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಈ ರೀತಿಯ ನಿರ್ಲಕ್ಷ್ಯತೆ ತೋರಿದ ಹುಲ್ಲೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಇವರು ಸರ್ಕಾರದ ನಿರ್ದೇಶನಗಳೂ ಗಾಳಿಗೆ ತೂರಿ, ರಾಷ್ಟ್ರ ಧ್ವಜ ನೀತಿ ಸಂಹಿತೆ ಉಲ್ಲಂಘನೆಗೊಳಗಾಗುತ್ತವೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದೇ ಎಂಬುದು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.