ಮುದ್ದೇಬಿಹಾಳ: ಸರ್ಕಾರ ಜಾರಿಗೊಳಿಸುವ ಯೋಜನೆಗಳು ಜನಪರ ಕಾಳಜಿ ಹೊಂದಿರುತ್ತವೆ. ಬಡವರ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗಳು, ನಮ್ಮ ಕ್ಲಿನಿಕ್‌ಗಳು ಹೆಚ್ಚು ಉಪಯುಕ್ತವಾಗಿವೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಬಡಜನರಿಗೆ ಅನುಕೂಲ ಆಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿ ತೋರಿಸುತ್ತಿದೆ ಎಂದು ಶಾಸಕ, ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು. ಇಲ್ಲಿನ ಮಹೆಬೂಬನಗರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿಯಾಗಿ ಮಂಜೂರಾಗಿರುವ ನಮ್ಮ ಕ್ಲಿನಿಕ್ ಸೇವೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕ್ಲಿನಿಕ್‌ನಲ್ಲಿ ೧೮ ರೀತಿಯ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು. ಆರೋಗ್ಯ, ಪೌಷ್ಠಿಕ ಆಹಾರ ಮತ್ತು ಉತ್ತಮ ಶಿಕ್ಷಣ ಕೊಡುವುದು ಸರ್ಕಾರದ ನಿಲುವಾದರೆ ಅವುಗಳನ್ನು ಪಡೆದುಕೊಳ್ಳುವ ಜಾಣ್ಮೆ ನಾಗರಿಕರಲ್ಲಿರಬೇಕು. ಪುರಸಭೆಯ ನೆರವು ಪಡೆದು ಸರ್ಕಾರಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಸಂಪತ್ ಗುಣಾರಿ ಅವರು ಶಾಸಕರ ಸಲಹೆ ಮೇರೆಗೆ ನಮ್ಮ ಕ್ಲಿನಿಕ್‌ನ ರಿಬ್ಬನ್ ಕತ್ತರಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ|ಸತೀಶ ತಿವಾರಿ, ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಅನೀಲಕುಮಾರ ಶೇಗುಣಸಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ|ಸ್ನೇಹಾ ಆಲಗೂರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಣಿ ಅನುಸೂಯಾ ತೇರದಾಳ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಐ.ಸಿ.ಮಾನಕರ, ಯಲ್ಲಪ್ಪ ಚಲವಾದಿ, ಎ.ಐ.ಕೆಸಾಪುರ, ಬಸವರಾಜ ಗೊಲಬಾವಿ, ಎಸ್.ಸಿ.ರುದ್ರವಾಡಿ, ಲಕ್ಷ್ಮೀ ಚವ್ಹಾಣ, ಪ್ರತಿಭಾ, ಎಸ್.ಆರ್.ಸಜ್ಜನ, ಇಸ್ಮಾಯಿಲ್ ವಾಲಿಕಾರ, ನಮ್ಮ ಕ್ಲಿನಿಕ್ ಸಿಬ್ಬಂದಿ, ಆ ಭಾಗದ ಆಶಾ ಕಾರ್ಯಕರ್ತೆಯರು, ಬಡಾವಣೆಯ ನಾಗರಿಕರು ಇದ್ದರು.