ಜಮಖಂಡಿ; ಅಂಗವಿಕಲರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ಅವಶ್ಯವಾಗಿದೆ ಎಂದು ವಿಕಲಚೇತನ ನೌಕರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಗಡಿ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ವಿಶ್ವ ಅಂಗವಿಕಲ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ನಾಟಕದಲ್ಲಿ ಒಟ್ಟು ಮೂವತ್ತು ಲಕ್ಷ ವಿಕಲಚೇತನದ್ದಾರೆ. ವಿಕಲಚೇತನರ ಪರ ಧ್ವನಿ ಎತ್ತಲು ಒಬ್ಬರಿಗೆ ವಿಧಾನ ಪರಿಷತ್‌ನಲ್ಲಿ ಸ್ಥಾನಕೊಡಬೇಕು, ,ವಿವಿಧ ಇಲಾಖೆಗಳ ಜೊತೆ ವಿಕಲಚೇತನ ಇಲಾಖೆ ಕೂಡಿಗೊಂಡಿದ್ದು ಸೌಲಭ್ಯ ಒದಗಿಸಲು ತೊಂದರೆಯಾಗುತ್ತಿದೆ ಆದ್ದರಿಂದ ವಿಕಲಚೇತನರಿಗಾಗಿಯೇ ಒಂದು ಇಲಾಖೆ ತಾಲೂಕಿಗೊಬ್ಬರು ಅಧಿಕಾರಿಗಳನ್ನು ನೇಮಿಸಬೇಕು .ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಿಸುವಲ್ಲಿ ನಮ್ಮ ಸಂಘ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಸಾನಿಧ್ಯವಹಿಸಿ ಓಲೆಮಠದ ಆನಂದ ದೇವರು ಮಾತನಾಡಿ ಕಣ್ಣುಕಿವಿಮೂಗುಕೈಯ್ ಕಾಲು ಇಲ್ಲದವರು ವಿಕಲಚೇತನರಲ್ಲ ಅದೆಲ್ಲವೂ ಇದ್ದು ಮಾನವೀಯತೆಯಿಂದ ವರ್ತಿಸದವರೇ ನಿಜವಾದ ವಿಕಲಚೇತನರು, ಎಂದು ಹೇಳಿದರು. ಕಾರ್ಯಕ್ರಮದ ಪೂರ್ವದಲ್ಲಿ ಜಮಖಂಡಿಯ ನ್ಯಾಯಾಲಯದ ನ್ಯಾಯಾಧೀಶರು ವಿಕಲಚೇತನರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದ ಕುರಿತು ತಿಳಿಸಿದರು.
ಖಜಾನಾಧಿಕಾರಿಗಳಾದ ಶಿವನಗೌಡ ಬಿರಾದಾರ ಅವರು ಅರಳು ಹೂವುಗಳೇ ಹಾಡಿನ ಮೂಲಕ ಸ್ಪೂರ್ತಿ ತುಂಬಿದರು. ತಜಸೀಲ್ದಾರ ಅನಿಲ ಬಡಿಗೇರ ಅವರು ಅಂಗವಿಕಲರ ಹಕ್ಕಿನ ಕುರಿತು ತಿಳಿಸಿಕೊಟ್ಟರು. ಕ.ಸಾ.ಪ ಅಧ್ಯಕ್ಷ ಸಂತೋಷ ತಳಕೇರಿ ವಿಕಲಚೇತನರ ಸಾಧಕರ ಕುರಿತು ವಿವರಣೆ ನೀಡಿದರು. ಸರ್ವೋದಯ ಕಿವುಡ ಮೂಕ ಶಾಲೆಯ ಮಕ್ಕಳ ಮಲ್ಲಗಂಬ ಪ್ರದರ್ಶನ ಮತ್ತು ನೃತ್ಯಪ್ರದರ್ಶನ ನಡೆಯಿತು. ಚಂದ್ರಪ್ಪ ಸಿದಗೊಂಡರವರು ವಿಕಲಚೇತರ ಸಮಸ್ಯೆ ಮತ್ತು ಪರಿಹಾರದ ಕುರಿತು ಮಾಹಿತಿ ನೀಡಿದರು. ಮಾಜಿ ಶಾಸಕರಾದ ಆನಂದ ನ್ಯಾಮಗೌಡ,ವಿಜಯ ಹಲಗಿಮನಿ,ಪಿ.ಜಿ.ಅಜ್ಜನ್ನವರ,ಬಸವರಾ


