ಧಾರವಾಡ: ಧಾರವಾಡದ ಕೆಲಗೇರಿಯ ಮಾದರ ಓಣಿಯಲ್ಲಿ ಕರ್ನಾಟಕ ಬಹುಜನ ಚಳುವಳಿ ಸಂಘ ಧಾರವಾಡ ಜಿಲ್ಲೆ ಸಮಿತಿ ವತಿಯಿಂದ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಇದೇ ಸಮಯದಲ್ಲಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಧೀಮಂತರಿಗೆ ಮಾಜಿಮಹಾಪೌರರು ಈರೇಶ ಅಂಚಟಗೇರಿ ಸನ್ಮಾನಿಸಿ ಅಭಿನಂದನೆಗಳು ಸಲ್ಲಿಸಿ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಗಣ್ಯಮಾನ್ಯರೊಂದಿಗೆ ಚಾಲನೆ ನೀಡಿ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರೊಂದಿಗೆ ಸಂಘಟನೆಯ ರಾಜ್ಯಾಧ್ಯಕ್ಷರು ದೇವೇಂದ್ರ ಮಾದರ, ಬಸವರಾಜ ಗರಗ, ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ ಮಾದರ, ಧಾರವಾಡ ಜಿಲ್ಲಾಧ್ಯಕ್ಷರು ನಾಗೇಶ ಮಾಳಗಿ , ರಾಕೇಶ ದೊಡಮನಿ , ವಿಶಾಲ ಗೌಳಿ, ಸಹದೇವ ನಿಗದಿ,
ವರುಣ ಸಾಂಬ್ರಾಣಿ , ಮಹಾದೇವ ದಂಡಿನ, ಚಂದು ದೊಡಮನಿ, ಮುದಕೇಶ ಮಾದರ , ಮಂಜುನಾಥ ಹರಿಜನ ಹಾಗೂ ಗಣ್ಯಮಾನ್ಯರು ಸೇರಿದಂತೆ ಕೆಲಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.