ಬೆಳಗಾವಿ: (ಡಿ.12) ಅಂಗವಿಕಲರ ಅಂತರರಾಷ್ಟ್ರೀಯ ದಿನದ ಅಂಗವಾಗಿ ಕೆಎಲ್‌ಇ ವಿಶ್ವನಾಥ ಕತ್ತಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಳಗಾವಿ ಅವರ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದ ವತಿಯಿಂದ ಇತ್ತಿಚೇಗೆ ನಗರದ ಅಜಯ್ ಡೆಫ್ ಚಿಲ್ಡ್ರನ್ ರೆಸಿಡೆನ್ಷಿಯಲ್ ಸ್ಕೂಲ್ ಹಾಗೂ ಅಶಾ ಜ್ಯೋತಿ ಮಾನಸಿಕ ಅಸರ‍್ಥ ಮಕ್ಕಳ ಶಾಲೆಗಳಲ್ಲಿ ಮೌಖಿಕ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರವನ್ನು ಪ್ರಿನ್ಸಿಪಲ್ ಡಾ. ಅಲ್ಕಾ ಕಾಳೆ, ವಿಭಾಗಾಧ್ಯಕ್ಷರು ಡಾ. ಚಂದ್ರಶೇಖರ್ ಬಡಕರ, ಪ್ರೊಫೆಸರ್ ಡಾ. ಶಿವಯೋಗಿ ಹುಗರ, ಉಪನ್ಯಾಸಕರು ಡಾ. ಚೈತನ್ಯ ಉಪ್ಪಿನ್, ಪಿಆರ್ಒ ಮಹಾಂತೇಶ್ ಇಂಚಾಳ ಹಾಗೂ ಸ್ನಾತಕೋತ್ತರ–ಸ್ನಾತಕ ವಿದ್ಯರ‍್ಥಿಗಳ ಸಹಕಾರದಿಂದ ನಡೆಸಲಾಯಿತು.
ಮಕ್ಕಳಿಗೆ ಇಂಡಿಯನ್ ಸೈನ್ ಲ್ಯಾಂಗ್ವೇಜ್ (ISಐ) ಮೂಲಕ ಮೌಖಿಕ ಆರೋಗ್ಯ ಜಾಗೃತಿ ನೀಡಲಾಗಿದ್ದು ಬಳಿಕ ದಂತ ತಪಾಸಣೆ ಮಾಡಲಾಯಿತು. ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಮುಂದಿನ ಆರೈಕೆಗೆ ವಿಶ್ವನಾಥ ಕತ್ತಿದಂತ ಮಹಾವಿದ್ಯಾಲಯದ ಸಂಭAದಿಸಿದ ವಿಭಾಗಕ್ಕೆ ಕಳಿಸಲಾಯಿತು.
ಪ್ರಿನ್ಸಿಪಲ್ ಡಾ. ಅಲ್ಕಾ ಕಾಳೆ ಅವರು ಶಾಲಾ ಸಿಬ್ಬಂದಿಗೆ ಸಂಸ್ಥೆಯು ಮಕ್ಕಳಿಗಾಗಿ ಒದಗಿಸಿರುವ ಉಚಿತ ದಂತ ಸೇವೆಗಳು ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಓರಲ್ ಹೈಜಿನ್ ಕಿಟ್ಗಳನ್ನು ವಿತರಿಸಲಾಯಿತು.


