ಧಾರವಾಡ:– ಹು- ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಇಮ್ರಾನ ಯಲಿಗಾರ ಅವರ ನಿರ್ದೇಶನದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಿಭಾಗದಲ್ಲಿ ನೂತನವಾಗಿ ನಿರ್ಮಿಸಿದ ವಿರೋಧ ಪಕ್ಷದ ನಾಯಕರ ಕಚೇರಿಯ ಪೂಜಾ ಕಾರ್ಯಕ್ರಮ ನೇರವರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೀಪಕ ಚಿಂಚೋರಿ, ಇಸ್ಮಾಯಿಲ್ ತಮಾಟಗಾರ, ಕೆ. ಪಿ. ಟಿ. ಸಿ. ಎಲ್ ಅಧ್ಯಕ್ಷರಾದ ಖಾದ್ರಿ , ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ತಾವಂಶಿ, ವಿರಣ್ಣ ಮತ್ತಿಗಟ್ಟಿ, ನಾಗರಾಜ್ ಗುರಿಕಾರ, ಬಸವರಾಜ್ ಕಿತ್ತೂರ,ಮಂಜನಾಥ ಬೋವಿ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು ಇಮ್ರಾನ ಯಲಿಗಾರಗೆ ಶುಭಹಾರೈಸಿದರು.