ಸೆ.6 ರಂದು ನೇತ್ರದಾನ ಜಾಗೃತಿ ಜಾಥಾ: ಡಾ.ದೀಪಾ ಮುಗಳಿ

Ravi Talawar
ಸೆ.6 ರಂದು ನೇತ್ರದಾನ ಜಾಗೃತಿ ಜಾಥಾ: ಡಾ.ದೀಪಾ ಮುಗಳಿ
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ, ಜಮಖಂಡಿ; ದೇಶದಲ್ಲಿ 1.2 ಮಿಲಿಯನ್‌ ನಷ್ಟು ಕುರುಡರಿದ್ದಾರೆ. ಕಣ್ಣಿನ ಮಸೂರ (ಕರಿಗುಡ್ಡೆ) ದೋಶ ದಿಂದ ಚಿಕ್ಕ ಮತ್ತು ಮಧ್ಯಮ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಬಳಲುತ್ತಿದ್ದಾರೆ. ಅಂಥವರಿಗೆ ಪುನ; ದೃಷ್ಠಿ ಒದಗಿಸಬಹುದಾಗಿದ್ದು ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು 40ನೇಯ ರಾಷ್ಟ್ರೀಯ ನೇತ್ರದಾನ ಜಾಥಾ ನಡೆಸಲಾಗುತ್ತಿದೆ ಎಂದು ಡಾ.ದೀಪಾ.ಎಸ್‌.ಮುಗಳಿ ತಿಳಿಸಿದರು. ಎಂ.ಎಂ.ಜೋಷಿ ನೇತ್ರಾಲಯದಲ್ಲಿ ಬುಧವಾರ ಸಂಜೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೆ.6 ಶನಿವಾರ ದಂದು ನಗರದಲ್ಲಿ ನೇತ್ರದಾನ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಬಸವ ಭವನ ದಿಂದ ಜಾಥಾ ಪ್ರಾರಂಭವಾಗಲಿದೆ. ನಗರದ ಪ್ಯಾರಾ ಮೆಡಿಕಲ್‌ ಕಾಲೇಜುಗಳು, ಎಜಿಎಂ ಆಯುರ್ವೇದಿಕ್‌ ಕಾಲೇಜು ಸೇರಿದಂತೆ 11 ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

ದೇಶದಲ್ಲಿ ನೇತ್ರದಾನಕ್ಕೆಂದು ಹೆಸರು ನೋಂದಾಯಿಸುವರ ಸಂಖ್ಯೆ ಬಹಳ ಇದೆ ಆದರೆ ನೇತ್ರದಾನ ಮಾಡುವರ ಸಂಖ್ಯೆ ತೀರಾ ವಿರಳವಾಗಿದ್ದರಿಂದ ಸಮಸ್ಯೆ ಎದುರಾಗಿದೆ. ಈ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಉದ್ದೇಶ ದಿಂದ ಜಾಥಾ ಹಮ್ಮಿಕೊಳ್ಳ ಲಾಗಿದೆ. ಮೃತರಾದ 4 ರಿಂದ 6 ಗಂಟೆಯ ವಳಗೆ ಕಣ್ಣುಗಳನ್ನು ಸ್ವೀಕರಿಸಬಹುದಾಗಿದೆ. ಕುಟುಂಬಸ್ಥರ ಸನ್ಮತಿ ಅವಶ್ಯವಾಗಿ ರುವದರಿಂದ ನೇತ್ರದಾನ ಸಮಯದಲ್ಲಿ ತೊಂದರೆ ಉಂಟಾಗುತ್ತಿದೆ. 2 ವರ್ಷದಿಂದ ಮೇಲ್ಪಟ್ಟವರು ಯಾರಾದರೂ ನೇತ್ರದಾನ ಮಾಡಬಹುದು, ಸೋಂಕಿತರು ಹಾಗೂ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ನೇತ್ರಗಳನ್ನು ದಾನ ಮಾಡಲು ಬರುವದಿಲ್ಲ ಎಂದು ವಿವರಿಸಿದರು.

ನೇತ್ರದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಡಿವೈಎಸ್‌ಪಿ ರೋಶನ್‌ ಎಸ್‌.ಜಮೀರ, ತಹಸೀಲ್ದಾರ ಅನೀಲ ಬಡಿಗೇರ, ಪೌರಾಯುಕ್ತ ಜ್ಯೋತಿ ಗಿರೀಶ, ಐಎಂಎ ಅಧ್ಯಕ್ಷ ಡಾ.ದಡ್ಡಿ ಭಾಗವಹಿಸಲಿದ್ದಾರೆ. ಸುಮಾರು 500ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ದೃಷ್ಠಿಗಾಗಿ ನಡಿಗೆ ಎಂಬ ಧೇಯ ವಾಕ್ಯದೊಂದಿಗೆ ಜಾಗೃತಿಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಡಾ. ಪೂಜಾ ಗುಳೇದ ಮಾತನಾಡಿ ಪಂಚೇಂದ್ರಿಯ ಗಳ್ಲಿ ಅಗ್ರಸ್ಥಾನದಲ್ಲಿರು ನೇತ್ರವು ಮುಖ್ಯವಾದ ಅಂಗವಾಗಿದೆ. ವ್ಯಕ್ತಿಸತ್ತ ನಂತರವೂ ಇನ್ನೊಬ್ಬರಿಗೆ ಉಪಯೋಗವಾಗುವ ಪುಣ್ಯದ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು ಸ್ವಯಂ ಪ್ರೇರಣೆಯಿಂದ ನೇತ್ರದಾನ ಮಾಡಬೇಕು ಎಂದು ಹೇಳಿದರು. ವಿಜ್ಞಾನಿಗಳು ಕೃತಕ ನೇತ್ರಗಳನ್ನು ಸಿದ್ದಪಡಿಸುತ್ತಿದ್ದಾರೆ ಆದರೆ ಅದರಿಂದ ರೋಗಿಗಳಿಗೆ ಹೆಚ್ಚಿನ ಹಣ ಕರ್ಚು ಮಾಡಬೇಕಾಗುತ್ತದೆ. ಆದರೆ ದಾನ ದಿಂದ ಬರುವ ಕಣ್ಣುಗಳನ್ನು ಅವಶ್ಯ ವಿರುವ ಇಬ್ಬರಿಗೆ ಉಚಿತವಾಗಿ ಜೋಡಿಸಲಾಗುವದು ಎಂದು ಹೇಳಿದರು. ಧೀರಜ ಜೋಷಿ, ರವಿ ದಾಸರ, ವಿಜಯ, ಪ್ರಿಯಾಂಕಾ, ಸಮೀರ, ಅಬುಬಕರ ಇದ್ದರು.

WhatsApp Group Join Now
Telegram Group Join Now
Share This Article