ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ: ಚಿಕ್ಕೋಡಿಯಲ್ಲಿ ‌ಬೃಹತ್ ತಿರಂಗಾ ರಾಲಿ

Ravi Talawar
ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ: ಚಿಕ್ಕೋಡಿಯಲ್ಲಿ ‌ಬೃಹತ್ ತಿರಂಗಾ ರಾಲಿ
WhatsApp Group Join Now
Telegram Group Join Now
ಚಿಕ್ಕೋಡಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ,ಭಾರತೀಯ ಸೇನೆಯು ಆಪರೇಷನ್ ಸಿಂಧೂರ  ಕಾರ್ಯಾಚರಣೆ ಯಶಸ್ವಿಯಾದ  ಹಿನ್ನೆಲೆಯಲ್ಲಿ  ಪಟ್ಟಣದಲ್ಲಿ ಬೃಹತ್  ತಿರಂಗಾ ರಾಲಿ ನಡೆಯಿತು.
ತಿರಂಗಾ ರ್ಯಾಲಿಯ‌ ಮೂಲಕ ಸೇನೆಗೆ ಬೆಂಬಲವನ್ನು ಸೂಚಿಸಲಾಯಿತು.ಸಾವಿರ ಮೀಟರ್ ಉದ್ದದ ರಾಷ್ಟ್ರ ಧ್ವಜ ಹಿಡಿದು ಚಿಕ್ಕೋಡಿ ಪಟ್ಟಣದಾದ್ಯಂದತ ಮೇರವಣಿಗೆ ನಡೆಯಿತು.ತಿರಂಗಾ ರಾಲಿಯು ಆರ್.ಡಿ.ಕಾಲೇಜು‌ ಮೈದಾನದಿಂದ ಗಾಂಧಿ ಕಟ್ಟೆಯವರೆಗೆ ಜರುಗಿತು.ರಾಲಿಯಲ್ಲಿ ಪಟ್ಟಣದ ವಿವಿಧ ಶಾಲಾ ಕಾಲೇಜ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಚರಮೂರ್ತಿ ಮಠದ  ಸಂಪದನಾ ಸ್ವಾಮೀಜಿ,ನಂದಿಕುರಳಿ ವೀರಭದ್ರೇಶ್ವರ ಸ್ವಾಮೀಜಿ,ಸದಲಾಗದ ಶ್ರೀ ಶೃಧ್ದಾನಂದಾ ಸ್ವಾಮೀಜಿ,ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,ಶಾಸಕರಾದ ದುರ್ಯೋಧನ ಐಹೊಳೆ,ಶಶಿಕಲಾ ಜೊಲ್ಲೆ, ನಿಖೀಲ ಕತ್ತಿ,ಮಹಾಂತೇಶ ‌ಕವಟಗಿಮಠ,ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ,ಸೇರಿದಂತೆ ವಿವಿಧ ಮಠಾಧೀಶರು,ಮಾಜಿ ಸೈನಿಕರು ,ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article