ಧಾರವಾಡ: ತಿರಂಗಾ ವಿಜಯೋತ್ಸವ ಕಾರ್ಯಕ್ರಮ ನಿವೃತ್ತ ಭೂಸೇನೆ. ವಾಯು ಸೇನೆ ಮತ್ತು ಜಲ ಸೇನೆ ಯೋಧರಿಂದ ಧಾರವಾಡದ ಕಲಾಭವನ ದಿಂದ ಕಾರ್ಗಿಲ್ ತುಪ ಸ್ಮಾರಕ ಸಮಿತಿವರೆಗೆ ಆಪರೇಷನ್ ಸಿಂಧೂರ ಸಂಭ್ರಮಾಚರಣೆ ಆಚರಿಸುವ ಮುಖಾಂತರ ಭಾರತ ದೇಶಕ್ಕೆ ಬೆಂಗಾವಳಾಗಿ ನಿಂತ ನಮ್ಮ ಭಾರತ ಹೆಮ್ಮೆಯ ಸೇನೆಯ ವಿಜಯಶಾಲಿ ವಿಜಯೋತ್ಸವ ಆಚರಿಸುವ ಮೂಲಕ ದೇಶ ಒಂದೆ ಭಾರತ ಜಾತಿ ಒಂದೇ ಸೈನಿಕ ಘೋಷವಾಕ್ಯದೊಂದಿಗೆ ದೇಶ ಅಭಿಮಾನ ಹೆಚ್ಚಿಸುವ ಮುಖಾಂತರ ಮತ್ತು ಈ ಆಪರೇಷನ್ ಅಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುತ್ತಾ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇದಕ್ಕೆ ಚಾಲನೆ ನೀಡಿದ ನಿವೃತ್ತ ಅಧಿಕಾರಿ ಸಿಎಸ್ ಹವಾಲ್ದಾರ್ . ಮೋಹನ್ ಭಗವತ್. ಸುಂಕದ. ಬಿಎಸ್ ಬೇವೂರ . ಭೀಮಪ್ಪ ಜಾದವ . ಧಾರವಾಡ ಜಿಲ್ಲಾ ಅಧ್ಯಕ್ಷರು ಕೆಪಿಸಿಸಿ ಮಾಜಿ ಸೈನಿಕರ ಘಟಕ ಸಿಕಂದರ ( ಸಿಕ್ಕು ದಾದಾ) ಮತ್ತು ನಿವೃತ್ತ ಯೋಧರು ಮತ್ತು ದೇಶ ಅಭಿಮಾನಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು