ಧಾರವಾಡ : ನವಲೂರಿನಲ್ಲಿ ನಮ್ಮ ಕ್ಲಿನಿಕ್‍ನ್ನು ಶಾಸಕರಾದ ಅರವಿಂದ ಬೆಲ್ಲದ ಅವರು ಉದ್ಘಾಟಿಸಿದರು. ಕ್ಲಿನಿಕ್‍ನಿಂದ ನವಲೂರು ಹಾಗೂ ಸುತ್ತಲಿನ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು ಮತ್ತು ಪ್ರಯೋಗಾಲಯ ಸೇವೆಗಳು ಮನೆ ಬಾಗಿಲಿನಲ್ಲಿಯೇ ದೊರೆಯುವಂತಾಗಿದೆ. ಹಾಗೂ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಪೋರೇಟರ್ ಡಾ. ಮಯೂರ ಮೋರೆ, ಪಿಕೆಪಿಎಸ್ ಸೊಸೈಟಿಯ ಅಧ್ಯಕ್ಷರು ಮಂಜುನಾಥ ಕಟ್ಟಿ, ಮಾಜಿ ಕಾರ್ಪೋರೇಟರ್ ಶಿವಣ್ಣ ಅವರು ಉಪಸ್ಥಿತಿರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶಶಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್. ಅವರು ಸ್ವಾಗತಿಸಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಸುಜಾತ ಹಸವೀಮಠ ವಂದಿಸಿದರು.
ವೈದ್ಯಾಧಿಕಾರಿ ಡಾ. ಗಾಯತ್ರಿ ಕರ್ಜಗಿ, ನಗರ ಕಾರ್ಯಕ್ರಮ ವ್ಯವಸ್ಥಾಪಕರು ಸತೀಶ ಹಾಗೂ ನಮ್ಮ ಕ್ಲಿನಿಕ್‍ನ ಸಿಬ್ಬಂದಿಗಳು ಹಾಗೂ ನವಲೂರು ಸಮಸ್ತ ಗುರು ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.