ಗದಗ ಜುಲೈ 15: ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ, ಕೇರಳ ಪ್ರದೇಶ) ಬೆಂಗಳೂರು ಇವರು ಖಾಲಿ ಇರುವ ಸಿ.ಬಿ.ಎನ್ ನಲ್ಲಿ ಎಂಟಿಎಸ್ ಮತ್ತು ಹವಾಲ್ದಾರ್” ಸಿ.ಬಿ.ಐ.ಸಿ ನಲ್ಲಿ ಹವಾಲ್ದಾರ್ ಮತ್ತು ಇತರ ಎಂಟಿಎಸ್ ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಅಕ್ಟೋಬರ್-ನವೆಂಬರ್ 2024 ರಲ್ಲಿ ನಡೆಯಲಿದೆ. ಪರೀಕ್ಷೆಯ ನಿಖರ ದಿನಾಂಕವನ್ನು ನಂತರ ಎಸ್‍ಎಸ್‍ಸಿ ವೆಬ್‍ಸೈಟ್ ಮೂಲಕ ತಿಳಿಸಲಾಗುವುದು.
ವಯೋಮಿತಿ: 01.08.2024ರಂತೆ ಸಿ.ಬಿ.ಎನ್‍ನಲ್ಲಿ ಎಂಟಿಎಸ್ ಹÅದ್ದೆಗೆ 18 ರಿಂದ 25 ವರ್ಷಗಳು. 01.08.2024 ರಂತೆ ಸಿ.ಬಿ.ಐ.ಸಿನಲ್ಲಿ ಹವಾಲ್ದಾರ್ ಮತ್ತು ಇತರ ಎಂಟಿಎಸ್ ಹÅದ್ದೆಗಳಿಗೆ 18 ರಿಂದ 27 ವರ್ಷಗಳು.
ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ ( ಎಸ್ ಎಸ್ಸ ಎಲ್ ಸಿ/ 10 ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು. ನೇಮಕಾತಿ ವಿಧಾನ: ಎರಡು ಪ್ರಶ್ನೆ ಪತ್ರಿಕೆಗಳನ್ನು ಹೆÇಂದಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ. (ಹವಾಲ್ದಾರ್ ಹÅದ್ದೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ) ಇರುತ್ತದೆ.
ಹುÅದ್ದೆಗಳ ಸಂಖ್ಯೆಃ ಎಮ್.ಟಿ.ಎಸ್-ಸುಮಾರು-4,887 ಮತ್ತು ಹವಾಲ್ದಾರ್ -ಸುಮಾರು-3,439
ಅರ್ಜಿ ಸ್ವೀಕರಿಸಲು ಅಂತಿಮ ಜುಲೈ 31 ಆಗಿದ್ದು ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ
ಅಂತರ್ಜಾಲ ಮಾದ್ಯಮದಲ್ಲಿ ಎಸ್‍ಎಸ್‍ಸಿಮುಖ್ಯಾಲಯದ ಜಾಲತಾಣ
https://ssc.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಬೆಳಗಾವಿ, ಬೆಂಗಳೂರು, ಹÅಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ. ಇಲ್ಲಿ ಪರೀಕ್ಷೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಎಸ್ ಎಸ್‍ಸಿ ಮುಖ್ಯ ಕಛೇರಿ ನವದೆಹಲಿಯ ವೆಬ್‍ಸೈಟ್
https://ssc.gov.in ಮತ್ತು ಕರ್ನಾಟಕ-ಕೇರಳದ ಜಾಲತಾಣ
www.ssckkr.kar.nic.in ಗಮನಿಸಿ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಕೊಠಡಿ ಸಂ ಃ 215, ಜಿಲ್ಲಾ ಆಡಳಿತ ಭವನ ಗದಗ ಇಲ್ಲಿ ಕಚೇರಿ ವೇಳೆಯಲ್ಲಿ ಭೀಟಿ ಮಾಡಿ ಹೆಚ್ಚಿನÀ ಮಾಹಿತಿ ಪಡೆಯಬಹುದಾಗಿದೆ. ದೂರವಾಣಿ ಕಛೇರಿ ನಂ ಃ 08372-220609.