ಬೆಳಗಾವಿ: “ಭಾರತೀಯ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರು ‘ಗುರುಗಳು. ಯಾವುದೇ ಒಬ್ಬ ವ್ಯಕ್ತಿ ಪ್ರಖ್ಯಾತಿ ಪಡೆಯಲು ಗುರುವಿನ ಶಕ್ತಿಯೇ ಆಸರೆಯಾಗಲಿದೆ ” ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಹೇಮಾ ಸರದಿಸಾಯಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ಸನ್ 2024-25 ನೇ ಸಾಲಿನ ಲಿಂಗಾಯತ ಮಹಿಳಾ ಸಮಾಜ ಹಾಗೂ ” ದಿ ಆರ್ಟ್ ಆಪ್ ಲಿವಿಂಗ್ ” ವತಿಯಿಂದ ಆಯೋಜಿಸಲಾದ ಗುರು ಪೂರ್ಣಿಮಾ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ಅಪಹರಿಸಲಾಗದ ಸಂಪತ್ತಾದ ‘ವಿದ್ಯೆ’ ಯನ್ನು ಶಿಷ್ಯರಿಗೆ ಧಾರೆ ಎರೆದು, ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಶಕ್ತಿ ಗುರುಗಳಿಗೆ ಕೈಯಲ್ಲಿದೆ. ಗುರುಗಳು ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ ಬಾಳಿಗೆ ಬೆಳಕು ನೀಡುವವರು ಎನ್ನುತ್ತ, 12 ನೇ ಶತಮಾನದ ಬಸವ ಯುಗವು ವಚನ ಸಾಹಿತ್ಯದಿಂದ ಜಗಜಾಹಿರಾಗಿದೆ. ಬಸವಣ್ಣವರು ವಚನಗಳ ಮೂಲಕ ಸಮಾಜವನ್ನು ತಿದ್ದಿದವರು, ಜ್ಞಾನದ ಬೆಳಕು ಚೆಲ್ಲಿದವರು. ಜಗದ್ಗುರು ಮಹಾ ಮಾನವತಾವಾದಿ ಬಸವಣ್ಣನವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯೋಣ. ಅದರಂತೆ, ಜಾಗತಿಕ ಮಾನವತಾವಾದಿ ಮತ್ತು ಶಾಂತಿದೂತರಾದ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಸಮಾಜ ಬೆಳಕು, ಸಮಾಜವನ್ನು ಪ್ರೀತಿಸುವ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಸಾರಿ ಹೇಳಿದವರು.
ಸಮಾಜಮುಖಿ ಕಾರ್ಯಗಳಿಗೆ ಸದಾ ಮೀಡಿಯುವ ಮಹಿಳಾ ಲಿಂಗಾಯತ ಸಮಾಜದ ಸಂಘಟನೆಯ ಇನ್ನು ಎತ್ತರಕ್ಕೆ ಬೆಳೆಯಬೇಕು, ಸಂಘಟನೆಯೂ ಇನ್ನಷ್ಟು ಬಲಿಷ್ಠಗೊಳಬೇಕು ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಸುನಿತಾ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಶೋಭಾ ಪಾಟೀಲ, ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರರಾದ ಶೈಲಜಾ ಭೀಂಗೆ, ರತ್ನಪ್ರಭಾ ಬೆಲ್ಲದ , ಜಯಶೀಲಾ ಪಾಟೀಲ್, ಕಾರ್ಯದರ್ಶಿ ಶಾರದಾ ಪಾಟೀಲ ನಿರೂಪಿಸಿದರು. ಸಹ ಕಾರ್ಯದರ್ಶಿ ವಿದ್ಯಾ ಚಂದ್ರಶೇಖರ ಗೌಡರ ವಂದಿಸಿದರು ಹಾಗೂ ಇತರರು.