ಖಾನಾಪುರ: ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ NAAC ಶಿಕ್ಷಣವು ತುಂಬಾ ಅನುಕೂಲವಾಗಿದೆ. ಬೋಧನೆ-ಕಲಿಕೆ, ಸಂಶೋಧನೆ, ಮೂಲಸೌಕರ್ಯ ಜೊತೆಗೆ ಕಾಲೇಜಿನ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗಕ್ಕೆ ಸಹಕಾರಿಯಾಗಲಿದೆ ಎಂದು ಆರ್ ಸಿಯು ಆಯ್ ಕ್ಯೂ ಎಸಿ ನಿರ್ದೇಶಕರಾದ ಪ್ರೊ, ಜೆ. ಮಂಜಣ್ಣ ಹೇಳಿದರು.
ಖಾನಾಪುರ್ ತಾಲೂಕಿನ ಮರಾಠ ಮಂಡಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸಭಾಂಗಣದಲ್ಲಿ ಆಯೋಜಿಸಲಾದ ಸೆ. 20 ರಂದು ‘ನ್ಯೂ ಗೈಡ್‌ಲೈನ್ಸ್ ಆಫ್ ನ್ಯಾಕ್ ಅಕ್ರಿಡಿಟೇಶನ್’ (NAAC ಮಾನ್ಯತೆಗಾಗಿ ಹೊಸ ಮಾರ್ಗಸೂಚಿಗಳು) ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
NAAC (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ) ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ (ಕಾಲೇಜುಗಳು, ವಿಶ್ವವಿದ್ಯಾಲಯಗಳು) ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ, ಮಾನ್ಯತೆ ನೀಡುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. NAAC ಗ್ರೇಡ್ ಮೂಲಕ ವಿದ್ಯಾರ್ಥಿಗಳು ಕಾಲೇಜಿನ ಸಮಗ್ರ ಕಾರ್ಯಕ್ಷಮತೆ, ಅದರ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳನ್ನು ಅರಿಕೊಳ್ಳಬಹುದು.ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅನುಭವ ಸಿಗಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.
ಕಲಿಕೆಯಲ್ಲಿ ಗುಣಮಟ್ಟವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳುವುದು, ಅದು NAAC ಅನುಕೂಲವಾಗಲಿದೆ. ಗ್ರಾಮೀಣ ಬಾಗದ ವಿದ್ಯಾರ್ಥಿಗಳು ತುಂಬಾ ಕೌಶಲ್ಯಯುಳ್ಳವರಾಗಿರುತ್ತಾರೆ ಎಂದು ಶ್ಲಾಘಿಸಿದರು.
ಕಿತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೊ. ಅಫ್ತಾಬ್ ಬಾಯ್, ಗ್ರಾಮೋನ್ನತಿ ಪದವಿ ಮಹಾವಿದ್ಯಾಲಯ, ಪುಣೆಯ ಪ್ರೊ. ಜೆ.ಪಿ. ಭೋಸಲೆ,
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಶ್ರೀ ಬಿ. ಅಂಚಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಾಜಿ ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ಉಮಾಕಾಂತ್ ಹಟ್ಟಿ ಕತ್ತಿ, ಪ್ರೊ. ಸುನಿಲ್ ತಾಟೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಡಾ. ವಿಜಯಲಕ್ಷ್ಮಿ ತಿರ್ಲಾಪುರ್ , ಪ್ರೊ. ಕಪಿಲ್ ಗುರುವ, ಡಾ. ಶಕುಂತಲಾ ಕುರಣಿ, ಡಾ. ಐ.ಎಂ. ಗುರವ್, ಡಾ. ಮಗದುಮ್ಮ, ಡಾ. ಕಾಕಾ ಸಾಹೇಬ್ ಗಸ್ತಿ , ಪ್ರೊ. ಸಂದೀಪ ಪಾಧ್ಯೆ ನಿರೂಪಿಸಿದರು. ಡಾ. ಆರ್. ಎಸ್. ತೀರವೀರ ವಂದಿಸಿದರು.


