ಬಳ್ಳಾರಿ ಮಾ. 31 ( ಸಿರುಗುಪ್ಪ ) : ಶ್ರೀ ರಾಮನವಮಿ ಪ್ರಯುಕ್ತ ಶ್ರೀ ಸಂತ ಶಿಶುನಾಳ ಶರೀಫ ತತ್ವಪದ ಜಾನಪದ ಸಂಸ್ಕೃತಿ ಕಲಾ ಟ್ರಸ್ಟ್, ಶಂಕರ ಬಂಡೆ ವತಿಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಒಂದವಾಗಲಿ ಗ್ರಾಮದಲ್ಲಿ ಪಾಂಡು ವಿಜಯ ಅರ್ತಾಥ್ ಕೀಚಕನ ವಧ ಎಂಬ ಪೌರಾಣಿಕ ಬೈಲಾಟವನ್ನು ಪ್ರಸ್ತುತಪಡಿಸಲಾಯಿತು.
ಈ ಬೈಲಾಟದಲ್ಲಿ ಬಾಲಕೃಷ್ಣನಾಗಿ ಸಿ ನಾಗರಾಜ್ ದುರ್ಯೋಧನನಾಗಿ ಗೊಲ್ಲ ವೆಂಕಟೇಶ್ ಕರ್ಣನಾಗಿ ಗೊರವ ಅಯ್ಯಾಳಪ್ಪ ಧರ್ಮರಾಯನಾಗಿ ವೀರೇಶ್ ಭೀಮನಾಗಿ ಬಡಕಲ ಚಿದಾನಂದ ಅರ್ಜುನನಾಗಿ ಹೊಟ್ಟೆ ಸಿಂಹಾದ್ರಿ ಚಿತ್ರ ಸೇನನಾಗಿ ಈಶಾನಾಳ್ ಗಂಗಾಧರ ಉಗ್ರಸೇನನಾಗಿ ಗಂಗಣ್ಣ ಕೀಚಕನಾಗಿ ಬಲ್ಲೆಕಲ್ಲು ವೀರೇಶ್ ಮತ್ತು ಸ್ತ್ರೀಪಾತ್ರದಲ್ಲಿ ಪದ್ಮಗಂಧಿ ಮತ್ತು ಭಾನುಮತಿಯಾಗಿ ಕೂಡ್ಲಿಗಿಯ ವೈಟ್ ಸುಮಾ, ಸುದೀಪ್ ನಯಾಗಿ ಗೀತಮ್ಮ ದ್ರೌಪದಿಯಾಗಿ ಉಮಾ ಅಂಕನಾಳ ಪಾತ್ರಗಳನ್ನು ನಿರ್ವಹಿಸಿದರು. ಈ ಬಯಲಾಟದ ಸಂಗೀತವನ್ನು ಒಂದವಾಗಲಿ ಗ್ರಾಮದ ಎಚ್ ಎಮ್ ಪಂಪಯ್ಯ ಸ್ವಾಮಿ ನಡೆಸಿಕೊಟ್ಟರು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಪಿ ಸಣ್ಣ ಹೊನ್ನೂರ್ ಸಾಬ್ ತಿಳಿಸಿದ್ದಾರೆ.
ಈ ಪೌರಾಣಿಕ ಬೈಲಾಟವನ್ನು ಒಂದುವಾಗಲಿ ಗ್ರಾಮದ ಮುಖಂಡರಾದ ಈರಣ್ಣ ಈಚಲಪಾಟಿ ತಿಮ್ಮಪ್ಪ ಕೆ ಹುಸೇನ್ ಪೀರ ಮಲಗಿರಿ ತಾಯಣ್ಣ ಬಸ್ಸಟ್ಟಿ ಗೋವಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು ಗ್ರಾಮದ ಹಲವಾರು ಜನ ಈ ಪೌರಾಣಿಕ ಬಯಲಾಟ ಕಾರ್ಯಕ್ರಮವನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದರು.


