ಆ.18 ಮತ್ತು 19 ರಂದು ಇಪ್ಪಿತ್ತೇರಿ ಅಜ್ಜಯ್ಯನ ಮಠದಲ್ಲಿ ಶ್ರಾವಣ ಕಾರ್ಯಕ್ರಮ

Ravi Talawar
ಆ.18 ಮತ್ತು 19 ರಂದು ಇಪ್ಪಿತ್ತೇರಿ ಅಜ್ಜಯ್ಯನ ಮಠದಲ್ಲಿ ಶ್ರಾವಣ ಕಾರ್ಯಕ್ರಮ
WhatsApp Group Join Now
Telegram Group Join Now

ಹೊಸಪೇಟೆ: ಶ್ರೀಮದ್ ಉಜ್ಜಯಿನಿ ವೀರ ಸಿಂಹಸನಾಧೀಶ್ವರ ಶ್ರೀ ೧೦೦೮ ಜಗದ್ಗಮ್ಬರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಕೃಪಾಶೀರ್ವಾದ ಹಾಗೂ ದಿವ್ಯಸಾನಿಧ್ಯದೊಂದಿಗೆ ವಿಜಯನಗರ ಜಿಲ್ಲಾ ಹೊಸಪೇಟೆ ತಾಲೂಕು ಸುಕ್ಷೇತ್ರ ಇಪ್ಪಿತ್ತೇರಿ ಅಜ್ಜಯ್ಯನ ಮಠದ ಶ್ರೀ ಕರಿಬಸವೇಶ್ವರಸ್ವಾಮಿಯ ೧೭ನೇ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮ ಇದೇ ಆಗಸ್ಟ್ ೧೮ ಮತ್ತು ೧೯ ರಂದು ಎರಡು ದಿನಗಳ ಕಾಲ ಜರುಗಲಿದೆ.

ಶ್ರೀಮನೃಪ ಶಾಲಿವಾಹನ ಶಕೆ ೧೯೪೬ನೇ ಕ್ರೋಧಿನಾಮ ಸಂವತ್ಸರ ಶ್ರಾವಣ ಮಾಸ ಪ್ರಯುಕ್ತ ಅಂದು ರವಿವಾರರಾತ್ರಿ ೯-೩೦ ರಿಂದ ಸಂಗೀತ ಮತ್ತು ಭಜನಾ ಕಾರ್ಯಕ್ರಮ ಜರುಗಲಿದೆ. ಶ್ರೀ ಹುಲಿಗೆಮ್ಮ ದೇವಸ್ಥಾನ ಭಜನ ಮಂಡಳಿ ಇಪ್ಪತ್ತೇರಿ, ನೀಲೋಗಲ್ ಬಸವೇಶ್ವರ ಭಜನ ಮಂಡಳಿ ನಂ.೯ ಕಣಿವೆ ತಿಮ್ಮಲಾಪುರ ಇವರು ನಡೆಸಿಕೊಡಲಿದ್ದಾರೆ. ಮಾರನೆ ದಿನ ಸೋಮವಬಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಜರುಗುವುದು.

ಮುಂಜಾನೆ ೬ ಗಂಟೆಗೆ ಚಿತ್ತವಾಡಿಗಿಯ ಮಲ್ಲಿಕಾರ್ಜುನ ಗೌಡ ಇವರಿಂದ ಗ್ರಾಮದೇವತೆ ಶ್ರೀ ನೀಲಮ್ಮ ಗುಡಿಯಿಂದ, ಅಜ್ಜಯ್ಯನ ಮಠಕ್ಕೆ ಶ್ರೀ ವೀರಗಾಸೆ, ಭದ್ರಕಾಳಿ, ನಂದಿಕೋಲು, ಕಳಸದೊಂದಿಗೆ ಫಳಾರ ರಾಶಿ ತರುವ ಕಾರ್ಯಕ್ರಮ ಇದೆ. ನಂತರ ೬-೩೦ ಗಂಟೆಗೆ ಗಂಗೆ ಸ್ಥಳಕ್ಕೆ ಹೋಗುವುದು. ವೀರಗಾಸೆ, ಭದ್ರಕಾಳಿ, ನಂದಿಕೋಲು, ಸಮ್ಮಾಳ ಮೇಳ, ಕುಂಭ-ಕಳಸ ಭಜನೆಗಳೊಂದಿಗೆ ಬಹು ವಿಜೃಂಭಣೆಯಿAದ ಇಪ್ಪಿತ್ತೇರಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಲಿದೆ. ನಂತರ ಧ್ವಜದ ಸವಾಲು ಆದ ಮೇಲೆ ಸದ್ಭಕ್ತ್ಷರಿಂದ ಅಗ್ನಿಪ್ರವೇಶ, ಮಹಾಮಂಗಳಾರತಿ, ನಂತರ ಮಹಾಪ್ರಸಾದ ಜರುಗಲಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾದ ಮನೋಜ್ ಅಲುಂಗಲ್, ಹಿಂದೂ ರಾಷ್ಟç ಸೈನ್ಯದ ಅಧ್ಯಕ್ಷರಾದ ಸಂದೀಪ್ ಗುರೂಜಿ, ಗೋ ಸೇವಕರಾದ ಮಹೇಂದ್ರ ಮನೋಜ್, ವಿಜಯಪುರದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ಧಲಿಂಗಯ್ಯ ಸಂಗನಬಸಯ್ಯ ಹಿರೇಮಠ, ಮಾನನೀಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು, ಸಂಸದರು ಮತ್ತು ವಿವಿಧ ಕ್ಷೇತ್ರದ ಸಾಧಕರಾದ ಹೆಚ್.ಆರ್.ಜಿ. ಗವಿಯಪ,್ಪ, ತುಕರಾಂ, ಬಿ.ಎಸ್. ಆನಂದ್ ಸಿಂಗ್, ಹೆಚ್.ಎನ್.ಎಫ್. ಇಮಾಮ್ ಸಾಬ್ ನಿಯಾಜಿ, ದೇವೇಂದ್ರಪ್ಪ, ಕವಿತಾ ಈಶ್ವರ್ ಸಿಂಗ್, ಎಂ. ಎಸ್. ದಿವಾಕರ, ವಿಶ್ವಜಿತ ಮೆಹತ, ರಾಜಶೇಖರ್ ಹಿಟ್ನಾಳ್, ರಾಘವೇಂದ್ರ ಹಿಟ್ನಾಳ್, ಗಾಲಿ ಜನಾರ್ದನರೆಡ್ಡಿ, ಪರಣ್ಣ ಮನವಳ್ಳಿ, ಕರಡಿ ಸಂಗಣ್ಣ, ಡಾ. ಬಸವರಾಜ್, ಸಿ.ವಿ. ಚಂದ್ರಶೇಖರ, ಎಂ.ಬಿ. ಪಾಟೀಲ್ ಕೃಷಿ ಇಲಾಖೆ, ವಿ. ಎಂ. ಭೂಸನೂರಮಠ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಅಧ್ಯಕ್ಷತೆಯನ್ನು ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಹಾಶಿವಶರಣೆ ಪ.ಪೂ. ಮಾತೃಶ್ರೀ ಅನುರಾಧೇಶ್ವರಿ ಅಮ್ಮನವರು ವಹಿಸಲಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ಇಪ್ಪಿತ್ತೇರಿ ಮಠದಿಂದ ಉಕ್ಕಡಗಾತ್ರಿ ಮಠದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಬರುವಂತ ಭಕ್ತಾಧಿಗಳು ತಮ್ಮ ಹೆಸರನ್ನು ಮಠಕ್ಕೆ ಬಂದು ನೊಂದಾಯಿಸಿಕೊಳ್ಳಬಹುದು.

 

WhatsApp Group Join Now
Telegram Group Join Now
Share This Article