11 ರಂದು ರನ್ನ ಬೆಳಗಲಿ ಪುಣ್ಯಕೋಟಿ ಆಶ್ರಮಕ್ಕೆ ಮಹಾ ನಾಗಸಾಧು ಮತ್ತು ಅಘೋರಿ ವಿದ್ಯಾ ಪಾರಂಗತರ ಬೇಟಿ

Hasiru Kranti
11 ರಂದು ರನ್ನ ಬೆಳಗಲಿ ಪುಣ್ಯಕೋಟಿ ಆಶ್ರಮಕ್ಕೆ ಮಹಾ ನಾಗಸಾಧು ಮತ್ತು ಅಘೋರಿ ವಿದ್ಯಾ ಪಾರಂಗತರ ಬೇಟಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಭುವನೇಶ್ವರಿ ತೋಟದ ಪುಣ್ಯಕೋಟಿ ಆಶ್ರಮದಲ್ಲಿ ದಿನಾಂಕ: ೧೧/೫/೨೦೨೫ ಮತ್ತು ೧೨/೦೫/೨೦೨೫ರ ಎರಡು ದಿನಗಳ ಕಾಲ “ಗಂಗಾಜಲ ಸಿಂಚನ ಮಹೋತ್ಸವ, ಮಹಾ ಚಂಡಿಕಾ ಯಾಗ, ಮಹಾರುದ್ರ ಯಾಗ ಮತ್ತು ದುರ್ಗಾ ಸಪ್ತಶತಿ ಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ.

ಈ ಕಾರ್ಯಕ್ರಮಕ್ಕೆ ಪೀರಯೋಗಿ ಶ್ರೀ ಸಿಂಗನಾಥಜಿ ಮಹಾರಾಜರು, ಬಾಲನಾಥಜಿ ಸಮಾಧಿ ಮಂದಿರ, ಬಾಲೆವಾಡಿ ಮಠ. ವಾಟರೆ ಗ್ರಾಮದ ಖಾನಾಪುರ ತಾಲೂಕಿನ ಬೆಳಗಾವಿ ಜಿಲ್ಲೆಯ ನಾಥ ಪರಂಪರೆ ಮಹಾರಾಜರು ಮತ್ತು ಹರಿಯಾಣ ರಾಜ್ಯದ ಸುಪ್ರಸಿದ್ದ ನಾಥ ಪರಂಪರೆಯ ಮಠದ ಶ್ರೀಮಠ ಅಧಿಪತಿಯಾದ ಮಹಾಮಾತೆ ಅಘೋರಿ ವಿದ್ಯಾ ಸಾಧಕಿ ಮಹಾ ಅ? ಅಣಿಮಾ ಸಿದ್ದಿ ಮಹತಪಸ್ವಿ ಚಂಚಲನಾಥ ಮಾತಾಜಿಯವರು ಪುಣ್ಯಕೋಟಿ ಆಶ್ರಮದ ಶ್ರೀಗಳಾದ ಡಾ.ರಮೇಶ ಕುಮಾರ್ ಶಾಸ್ತ್ರಿಜಿ (ಚಿದಾನಂದ ಮಹಾರಾಜ)ರ ದರ್ಶನ ಆಶೀರ್ವಾದಕ್ಕೆ ಆಗಮಿಸಿ ಗುರುಗಳ ಆಶ್ರಮದಲ್ಲಿ ಜರುಗುವ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತ ಸಮೂಹವನ್ನು ಆಶೀರ್ವದಿಸಲಿದ್ದಾರೆ ಎಂದು ಆಶ್ರಮದ ಮುಖ್ಯಸ್ಥರು,ಭಕ್ತ ವೃಂದದವರು ಮಾಹಿತಿಯನ್ನು ನೀಡಿದ್ದಾರೆ.

ಕಾರಣ ಎಲ್ಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿಯವರ ಹಾಗೂ ನಾಥ ಪರಂಪರೆ ಗುರುಗಳ ದರ್ಶನ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳಲು ನಾಡಿನ ಹಾಗೂ ಸುತ್ತಮುತ್ತಲಿನ ಪಟ್ಟಣದ ಸದ್ಭಕ್ತರು ಆಗಮಿಸಿ ಆಶೀರ್ವಾದವನ್ನು ಪಡೆದು ಪುನೀತರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article