ಮೇ 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸಪೇಟೆಗೆ ಆಗಮನ; ‘ಪ್ರಗತಿಯತ್ತ ಕರ್ನಾಟಕ-ಸಮರ್ಪಣೆಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಭಾಗಿ

Ravi Talawar
ಮೇ 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸಪೇಟೆಗೆ ಆಗಮನ; ‘ಪ್ರಗತಿಯತ್ತ ಕರ್ನಾಟಕ-ಸಮರ್ಪಣೆಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಭಾಗಿ
The President, Shri Pranab Mukherjee gracing the function to commemorate the serving of 2 billion meals of the Akshaya Patra Foundation, at Bangalore, in Karnataka on August 27, 2016. The Governor of Karnataka, Shri Vajubhai Rudabhai Vala, the Chief Minister of Karnataka, Shri Siddaramaiah and the Union Minister for Human Resource Development, Shri Prakash Javadekar are also seen.
WhatsApp Group Join Now
Telegram Group Join Now



ಬಳ್ಳಾರಿ,ಮೇ 19ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಮೇ 20 ರಂದು ಹೊಸಪೇಟೆ ನಗರಕ್ಕೆ ಆಗಮಿಸಲಿದ್ದು, ಕಂದಾಯ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿರುವ ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಡುವ ಅವರು, 9.50 ಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟಿçಪ್‌ಗೆ ಆಗಮಿಸುವರು. ಬೆಳಿಗ್ಗೆ 11.15ಕ್ಕೆ ಜಿಂದಾಲ್ ಏರ್‌ಸ್ಟಿçಪ್ ನಿಂದ ಹೆಲಿಕಾಪ್ಟರ್ ಮೂಲಕ ಹೊರಟು, 11:30ಕ್ಕೆ ಹೊಸಪೇಟೆ ನಗರದ ಭಟ್ಟರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೆಲಿಪ್ಯಾಡ್‌ಗೆ ಬಂದಿಳಿಯುವರು. ನಂತರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ಕಂದಾಯ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ವತಿಯಿಂದ ಜರುಗಲಿರುವ ‘ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ’, ಎರಡು ವರ್ಷಗಳ ಜನಪರ ಸಾಧನೆಯ ಸಮರ್ಪಣೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ ಒಂದು ಲಕ್ಷ ಕುಟುಂಬಗಳಿಗೆ ನೆಮ್ಮದಿ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಭಟ್ಟರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದ ಪ್ಯಾಡ್‌ನಲ್ಲಿ ಹೆಲಿಕ್ಯಾಪ್ಟರ್ ಮೂಲಕ 03:15 ಕ್ಕೆ ಜಿಂದಾಲ್ ಏರ್‌ಸ್ಟಿçಪ್ ತೋರಣಗಲ್ಲು ತಲುಪಿ 03:20 ಕ್ಕೆ ವಿಶೇಷ ವಿಮಾನದಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.

WhatsApp Group Join Now
Telegram Group Join Now
Share This Article