ಬಳ್ಳಾರಿ ಮೇ 12: ತಾಲೂಕಿನ ಮೋಕ ಹೋಬಳಿಯ ದಾಸರ ನಾಗನಹಳ್ಳಿ ಗ್ರಾಮದ ಶ್ರೀಮದ್ ಉಜ್ಜಯಿನಿ ಖಾಸ ಶಾಖ ಮಠ, ಶ್ರೀ ಗುರು ಮರುಳ ಸಿದ್ದಾಶ್ರಮ ಶ್ರೀ ನಂಜುಂಡೇಶ್ವರ ಜನ ಸೇವಾ ಕಲ್ಯಾಣ ಟ್ರಸ್ಟ್ ವತಿಯಿಂದ ಮಠದ ಪರಮಪೂಜ್ಯ ತಿಪ್ಪೇಸ್ವಾಮಿ ತಾತನವರ ಏಳನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಉಜ್ಜಯಿನಿ ಮತ್ತು ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸದ್ಧರ್ಮ ಶಿರೋಮಣಿ ಪೂಜ್ಯಶ್ರೀ ನಂಜುಂಡೇಶ್ವರ ತಾತನವರು ತಿಳಿಸಿದ್ದಾರೆ.
ಅವರು ಇಂದು ಮಠದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಮೇ 17 ರಂದು ಲೋಕಕಲ್ಯಾಣಕ್ಕಾಗಿ ಗಣಪತಿ ಹೋಮ ರುದ್ರ ಹೋಮ ಮತ್ತು ಮಹಾ ಚಂಡಿ ಹೋಮ ನಡೆಸಲಾಗುವುದು ಮತ್ತು ಮೇ 18ರಂದು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಮತ್ತು ಶ್ರೀಮದ್ ಕಾಶಿ ಜಗದ್ಗುರುಗಳ ಅವರ
ಅಡ್ಡ ಪಲ್ಲಕ್ಕಿ ಮಹೋತ್ಸವ ಸಾಮೂಹಿಕ ವಿವಾಹಗಳು ಜೊತೆಗೆ ಆ ದಿನ 501 ಮಂಗಳಮುಖಿಯರಿಗೆ ವಿಶೇಷವಾಗಿ ಉಡಿ ತುಂಬ ಕಾರ್ಯಕ್ರಮವನ್ನು ನಡೆಸಲಾಗುವುದು ಮತ್ತು ಕೊನೆಯ ದಿನ ಮೇ 19ರಂದು ಉಜ್ಜಯಿನಿ ಜಗದ್ಗುರುಗಳವರಿಂದ ಇಷ್ಟು ಲಿಂಗ ಮಹಾಪೂಜೆ ಕಾರ್ಯಕ್ರಮ 108 ಜಂಗಮ ವಟುಗಳಿಗೆ ಅಯ್ಯೋ ಚಾರ ದೀಕ್ಷೆ, 1008 ಜಂಗಮ ಗಣರಾಧನೆ ಮತ್ತು 3501
ಸುಮಂಗಳಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಅಂದು ಸಂಜೆ ಧರ್ಮಸಭೆಯನ್ನು ನಡೆಸಲಾಗುವುದು.
ಈ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಮಠದ ಸಮಸ್ತ ಭಕ್ತಾದಿಗಳು ತಮ್ಮ ಸಕುಟುಂಬದ ಪರಿವಾರ ಸಮೇತರಾಗಿ ಆಗಮಿಸಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನು-ಮನ ದನದೊಂದಿಗೆ ಸೇವೆ ಸಲ್ಲಿಸಿ ನಾಡಿನ ಹರ ಗುರು ಚರಮೂರ್ತಿಗಳವರ ಆಶೀರ್ವಾದ ಪಡೆದು ಶ್ರೀ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಸದ್ಧರ್ಮ ಶಿರೋಮಣಿ ಶ್ರೀ ನಂಜುಂಡೇಶ್ವರ ತಾತನವರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಮೇ 19ರಂದು ಶ್ರೀ ಮರುಳಸಿದ್ದಾಶ್ರಮ ರಜತ ಮಹೋತ್ಸವದ ಅಂಗವಾಗಿ ಜಗದ್ಗುರು ದ್ವಯರಿಂದ ಶ್ರೀ ಪೂಜ್ಯರ ಧರ್ಮ ಅಧಿಕಾರ ದೀಕ್ಷ ಮಹೋತ್ಸವವನ್ನು ಪೂಜ್ಯಶ್ರೀ ರುದ್ರಮುನಿ ತಾತನವರು ದಾಸರಹಳ್ಳಿ ನಾಗೆನಹಳ್ಳಿ ಮಠ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವವರು ಸರ್ಕಾರದ ಎಲ್ಲಾ ನಿಯಮ ನಿಬಂಧನೆಗಳನ್ನು ಪೂರೈಸಬೇಕು ವಯಸ್ಸಿನ ಮತ್ತು ವಿಳಾಸಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿ ಮುಂಚಿತವಾಗಿ ನೋಂದಣಿಯನ್ನು ಮಾಡಿಸಿಕೊಳ್ಳಬೇಕೆಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮರಿಸ್ವಾಮಿಗಳಾದ ಚಾಮರಾಜಸ್ವಾಮಿ, ಮಠದ ಭಕ್ತಾದಿಗಳಾದ, ರಮೇಶ್ ಉಪ್ಪಾರ್, ದುರ್ಗಪ್ಪ, ಸಂತೋಷ್, ಅಂಬರೀಶ್, ರಮೇಶ್, ಅರವಿಂದ್ ಸೇರಿದಂತೆ ಇತರರಿದ್ದರು.