ಬಳ್ಳಾರಿ:07. ನಗರದ ಸತ್ಯನಾರಾಯಣ ಪೇಟೆ ಶ್ರೀ ರಾಘವೇಂದ್ರ ಮಠದಲ್ಲಿ ಮೇ.14 ರಂದು ಬಳ್ಳಾರಿ ಬ್ರಾಹ್ಮಣ ಸಂಘ ಹಾಗೂ ಶ್ರೀರಾಘವೇಂದ್ರ ಕ್ಯಾಟರಿಂಗ್ ಆಶ್ರಯದಲ್ಲಿ ಹಾಗೂ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡ್ ರೇಶನ್ ಸಹಕಾರದೊಂದಿಗೆ ಸಾಮೂಹಿಕ ಶ್ರೀ ವೆಂಕಟೇಶ ಕಲ್ಯಾಣ ಮಹೋತ್ಸವ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಧ್ವವಿಜಯ ಪ್ರಶಸ್ತಿ ವಿಜೇತ, ಕ್ಯಾಟರಿಂಗ್ ಕಂಟ್ರಾಕ್ಟರ್ ಜೆ.ವಿಜಯ ವಿಠಲ ಅವರು ತಿಳಿಸಿದ್ದಾರೆ. ಪ್ರತ್ರಿ ವರ್ಷ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಹಾಗೂ ಸಮಾಜದ ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಕಳೆದ 5 ವರ್ಷಗಳಿಂದ ಶ್ರೀ ರಾಘವೇಂದ್ರ ಕ್ಯಾಟರಿಂಗ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದೆ. ಮೇ.14ರಂದು ಬೆಳಿಗ್ಗೆ 7 ರಿಂದ 7.30 ರ ವರೆಗೆ ಸಲ್ಲುವ ವೃಷಭಲಗ್ನದಲ್ಲಿ ಉಪನಯನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಸಾಮೂಹಿಕ ಉಪನಯನಕ್ಕೆ ಕೇವಲ 3 ಸಾವಿರ ನಿಗದಿಪಡಿಸಲಾಗಿದ್ದು, ಸಾಮೂಹಿಕ ಶ್ರೀ ವೆಂಕಟೇಶ್ ಕಲ್ಯಾಣ ಮಹೋತ್ಸವಕ್ಕೆ 150 ರೂ. ನಿಗದಿ ಮಾಡಲಾಗಿದೆ. ಆಸಕ್ತರು 99865 55640 ಸಂಖ್ಯೆಗೆ ಕರೆ ಮಾಡಿ, ತಮ್ಮ ಸಂಪೂರ್ಣ ವಿಳಾಸ, ವಟುವಿನ ಹೆಸರು, ಗೋತ್ರ ಸೇರಿದಂತೆ ಅಗತ್ಯ ಮಾಹಿತಿಯನ್ನು ತಿಳಿಸಬಹುದು. ಶ್ರೀ ವೆಂಕಟೇಶ ಕಲ್ಯಾಣೋತ್ಸವದ ನೇತೃತ್ವ ವಹಿಸಿರುವ ಅರ್ಚಕರಾದ ಪಂ.ಸತ್ಯನಾರಾಯಣ ಆಚಾರ ಹಲಕುಂದಿ 94491 35993, ಸಾಮೂಹಿಕ ಉಪನಯನ, ಅರ್ಚಕರಾದ ಪಂ.ಶ್ರೀ ದಾಸ ಆಚಾರ್ಯ, ಹಿರೇಹಾಳ್ ಕೃಷ್ಣಾಚಾರ್, ಗುರುರಾಜ ಆಚಾರ, ಪವನ ಆಚಾರ ಅವರ ನೇತೃತ್ವ ವಹಿಸಲಿದ್ದಾರೆ. ಎಲ್ಲ ಕಾರ್ಯಕ್ರಮಗಳು ಶ್ರೀಮಠದ ಆಡಳಿತಾಧಿಕಾರಿಗಳಾದ ಪಂ.ಶ್ರೀ ಪ್ರಸನ್ನಾಚಾರ್ ಅವರ ನೇತೃತ್ವದಲ್ಲಿ ನಡೆಯಲಿವೆ. ಉಪನಯನ ಕುರಿತು ಹೆಸರು ನೊಂದಾಯಿಸಿದವರು ಮೇ.14 ಬೆಳಿಗ್ಗೆ ಉದಯ 5ಕ್ಕೆ ಹಾಜರಿರಬೇಕು, ಬೇರೆ ಊರುಗಳಿಂದ ಬರುವವರಿಗೆ ಉಚಿತ ವಸತಿ, ಉಪಹಾರ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.