ಜು.27ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Ravi Talawar
ಜು.27ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
WhatsApp Group Join Now
Telegram Group Join Now

ಬಳ್ಳಾರಿ,ಜು.26: ನಗರದ ಕೆಲವೆಡೆ ವಿದ್ಯುತ್ ಲೈನ್ ನಿರ್ವಹಣೆ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜು.೨೭ ರಂದು ಬೆಳಿಗ್ಗೆ ೦೬ ಗಂಟೆಯಿಂದ ೦೨ ಗಂಟೆಯವರೆಗೆ  ವಿವಿಧೆಡೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-೨ರ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-೯ ಫೀಡರ್‌ನ ನೆಹರು ಕಾಲೋನಿ, ೧ನೇ ಅಡ್ಡರಸ್ತೆ, ೨ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಎಸ್.ಎನ್ ಪೇಟೆ ೩ನೇ, ೪ನೇ, ೫ನೇ ಮತ್ತು ೬ನೇ ಅಡ್ಡರಸ್ತೆ, ಡಿಎಅರ್ ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಚಲಂ ಕಾಂಪೌಂಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲ್ಲೂಕು ಅಫೀಸ್, ಡಿಸಿ ಅಫೀಸ್ ಸೇರಿದಂತೆ ಮುಂತಾದ ಕಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article