ಏ.27ಕ್ಕೆ ಗೋಮಾತೆಯ ಗೌರವದ ಅಭಿಯಾನ, ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

MK HasiruKranti
ಏ.27ಕ್ಕೆ ಗೋಮಾತೆಯ ಗೌರವದ ಅಭಿಯಾನ, ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
WhatsApp Group Join Now
Telegram Group Join Now
ಬಳ್ಳಾರಿ: 10:..ಗೋಮಾತೆಯ ಗೌರವ ದಿನಾಚರಣೆಯನ್ನು ಏ.27 ರಂದು ಇಡೀ ದೇಶಾದ್ಯಂತ  ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಗೋವು ಭಕ್ತರು ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ , ಶ್ರೀಮಠದ ಪ್ರಧಾನ ವ್ಯವಸ್ಥಾಪಕ ಪಂ.ಪ್ರಸನ್ನಾಚಾರ್ ಅವರು ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಏ.27 ರಂದು ಇಡೀ ವಿಶ್ವದಾತ್ಯಂತ ಗೋಮಾತಾ ಗೌರವ ದಿನವನ್ನು ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಗೋಮಾತೆಯ ಸೌoರಕ್ಷಣೆಗೆ, ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ದಿನಾಂಕದಂದು ಭಾರತೀಯ ಎಲ್ಲ ಗೋವು ಭಕ್ತರು, ತಮ್ಮ ತಮ್ಮ ವ್ಯಾಪ್ತಿಯ ತಹಶೀಲ ಕಚೇರಿ, ಬ್ಲಾಕ್ ಕಚೇರಿಗಳಿಗೆ ತೆರಳಿ ತಹಸೀಲ್ದಾರ್ ಅಥವಾ ಬ್ಲಾಕ್ ಅಧಿಕಾರಿಗಳವರ ಮೂಲಕ ದೇಶದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಬೇಕು ಎಂದರು.  ಗೋಮಾತೆಗೆ ರಾಷ್ಟ್ರೀಯ ತಾಯಿ, ರಾಷ್ಟ್ರೀಯ ದೇವರ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಗುರುತಿನ ಗೌರವಾನ್ವಿತ ಸ್ಥಾನವನ್ನು ನೀಡಬೇಕು, ಗೋವಿನ ಸೇವೆಗಾಗಿ ಕೇಂದ್ರ ಕಾನೂನು ರೂಪಿಸಬೇಕು, ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣ ಕೊನೆಗೊಳಿಸಬೇಕು. ಆಯುರ್ವೇದ ಆಸ್ಪತ್ರೆಗಳಲ್ಲಿ ಪಂಚಗವ್ಯ ಔಷಧಿಯನ್ನು ಉಚಿತವಾಗಿ ವಿತರಿಸಬೇಕು. ಕೈಬಿಟ್ಟ ದನಗಳ ಸೇವೆಗಾಗಿ ಎಲ್ಲ ರಾಜ್ಯಗಳು ಗೋಶಾಲೆಗೆ ಅನುದಾನವನ್ನು ಒದಗಿಸಬೇಕು. ಸರ್ಕಾರಿ ನಿಯಂತ್ರಿತ ದೇವಾಲಯಗಳಲ್ಲಿ ನೈವೇದ್ಯ, ಆರತಿ, ಪೂಜೆ, ಪ್ರಸಾದಕ್ಕಾಗಿ ಕಡ್ಡಾಯವಾಗಿ ದೇಸಿ ಹಸುಗಳ ಹಾಲು, ಮೊಸರು ಹಾಗೂ ತುಪ್ಪವನ್ನು ಬಳಸಬೇಕು. ರಾಸಾಯನಿಕ ಕೃಷಿಯನ್ನು ನಿಯಂತ್ರಿಸಿ, ಗೋಮಯ ಆಧಾರಿತ ಕೃಷಿಯನ್ನು ಸರ್ಕಾರಗಳು ಉತ್ತೇಜಿಸಬೇಕು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮಠಕ್ಕೆ ಶ್ರೀ ಗುರುರಾಯರ ದರ್ಶನಕ್ಕೆ ಆಗಮಿಸಿದ ಭಕ್ತರು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ, ಗೋವು ಭಕ್ತರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿವೃತ್ತ ತಹಸೀಲ್ದಾರ್ ಅಜಿತ್ ಸಿಂಗ್, ಲೆಕ್ಕ ಪರಿಶೋಧಕ ಕೆ.ನರಸಿಂಹ ಮೂರ್ತಿ, ಗೋವು ಭಕ್ತರಾದ ಸೂರಜ್, ಸುಬ್ರಹ್ಮಣ್ಯ  ಸಿ.ವಿ.ಸೇರಿದಂತೆ ನೂರಾರು ಭಕ್ತರು ಇತರರಿದ್ದರು.
WhatsApp Group Join Now
Telegram Group Join Now
Share This Article