ಬಳ್ಳಾರಿ29.: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪ-ಮೇಯರ್ ಚುನಾವಣೆ ನ.೧೫ರಂದು ಜರುಗಲಿದೆ ಎಂದು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ೨೦೧೯ರ ಜೂ.೩೦ರ ನಿರ್ದೇಶನ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರ ೨೦೨೫ರ ಅ.೨೪ರ ಕೋರಿಕೆ ಅನ್ವಯ ಕರ್ನಾಟಕ ಪೌರಾಡಳಿತ ಕಾಯ್ದೆ ೧೯೭೬ರ ಕಲಂ ೭೧ರ ಅನ್ವಯ ಹಾಗೂ ಚುನಾವಣೆ ನಿಯಮಗಳು ೧೯೭೯ರ ನಿಯಮ, ೭೧ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಬಳ್ಳಾರಿ ಮಹಾನಗರ ಪಾಲಿಕೆಯ ೨೪ನೇ ಅವಧಿಯ ಮೇಯರ್, ಉಪ-ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ೨೦೨೫ರ ನ.೧೫ರಂದು ಮಧ್ಯಾಹ್ನ ೧೨.೩೦ಕ್ಕೆ ಜರುಗಿಸಲು ನಿರ್ಧರಿಸಲಾಗಿದೆ ಎಂದು ೨೦೨೫ರ ಅ.೨೭ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ಪೌರಾಡಳಿತ ನಿಯಮ ೧೯೭೯ರ ನಿಯಮ ೭೨ರ ಅನ್ವಯ ಚುನಾವಣಾ ನೋಟೀಸ್ ಹೊರಡಿಸಿದ ದಿನಾಂಕದಿAದ ಚುನಾವಣೆ ನಿಗದಿಪಡಿಸಲಾದ ಸಮಯಕ್ಕೆ ೨ ಗಂಟೆ ಮುಂಚಿತವಾಗಿ ಮೇಯರ್, ಉಪ-ಮೇಯರ್, ಇತರೇ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.


