ಸರ್ವಜ್ಞರ ತ್ರಿಪದಿಗಳು ನೇರ ನುಡಿ ಮತ್ತು ಆಡು ಭಾಷೆಯ ನಿತ್ಯ ಸತ್ಯವಾಗಿವೆ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.

Ravi Talawar
ಸರ್ವಜ್ಞರ ತ್ರಿಪದಿಗಳು ನೇರ ನುಡಿ ಮತ್ತು ಆಡು ಭಾಷೆಯ ನಿತ್ಯ ಸತ್ಯವಾಗಿವೆ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.
WhatsApp Group Join Now
Telegram Group Join Now
ಧಾರವಾಡ: ಬದುಕಿನ ಎಲ್ಲ ಹಂತಗಳಲ್ಲಿಯೂ ಅನ್ವಯವಾಗುವ ನೀತಿ ಪಾಠಗಳನ್ನು ಹಾಗೂ ಜೀವನದ ನೈತಿಕ ಮೌಲ್ಯಗಳನ್ನು ತಮ್ಮ ತ್ರಿಪದಿಗಳಲ್ಲಿ ಸಂತ ಕವಿಶ್ರೇಷ್ಠ ಸರ್ವಜ್ಞನು ಸಮಾಜಕ್ಕೆ ಸಾಹಿತ್ಯದ ಮೂಲಕ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
 ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂತಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
 ಸರ್ವಜ್ಞರು ಸರ್ವ ವಿಷಯಗಳನ್ನು ಕುರಿತು ಬ್ರಹ್ಮನಂತೆ ತ್ರಿಪದಿಗಳನ್ನು ರಚಿಸಿ, ಆ ಮೂಲಕ ಜನಸಾಮಾನ್ಯರಿಗೆ ಉನ್ನತ ಜೀವನದ ಪಾಠವನ್ನು ಬೋಧಿಸಿದ್ದಾರೆ. ಅವರು ಆಡು ಭಾಷೆಯ ಮೂಲಕ ಜನರಿಗೆ ಬದುಕಿನ ಶ್ರೀಮಂತಿಕೆಯನ್ನು ವಿವರಿಸಿದ್ದಾರೆ ಎಂದು ಹೇಳಿದರು.
ಸರ್ವಜ್ಞರು ತಮ್ಮ ತ್ರಿಪದಿಯ ವಚನಗಳ ಮೂಲಕ ಕನ್ನಡ ಸಾಹಿತ್ಯವನ್ನು ಬೆಳಸಿ, ಅದಕ್ಕೆ ಉತ್ಕøಷ್ಟ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯನ್ನು ತಮ್ಮ ವಚನಗಳ ಮೂಲಕ ಶ್ರೀಮಂತಗೊಳಿಸಿದ್ದಾರೆ. ಸರಳ ಭಾಷೆಯಲ್ಲಿ ಸಮಾಜದ ಅಂಕು ಡೊಂಕನ್ನು ತ್ರಿಪದಿಯ ಮುಖಾಂತರ ಸರ್ವಜ್ಞರು ಸಾರಿದ್ದಾರೆ ಎಂದು ಅವರು ತಿಳಿಸಿದರು.
ಆಧುನಿಕ ಜೀವನ ಪದ್ಧತಿಯಲ್ಲಿ ಪ್ರತಿ ಕುಟುಂಬದ ವ್ಯಕ್ತಿಗಳಿಗೆ ಅನ್ವಯವಾಗುವಂತೆ ಮತ್ತು ಸಾಮಾಜಿಕ ನ್ಯಾಯ ಕಾಪಾಡುವಂತೆ ಸರ್ವಜ್ಞರು ತಮ್ಮ ತ್ರಿಪದಿಯ ವಚನಗಳ ಮೂಲಕ ಎಲ್ಲರನ್ನು ಎಚ್ಚರಿಸಿದ್ದಾರೆ. ಅವರ ನೇರ ನುಡಿ ಮತ್ತು ಆಡು ಭಾಷೆಯ ನುಡಿಗಳು ನಿತ್ಯ ಸತ್ಯವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಾವೇರಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ರಾಜಶೇಖರ ಧ. ಕುಂಬಾರ ಅವರು ಸಂತಕವಿ ಶ್ರೀ ಸರ್ವಜ್ಞ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
 ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಧಾರವಾಡ ಜಿಲ್ಲಾ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷ ಬಸವಂತಪ್ಪ ಬಿ.ಚಕ್ರಸಾಲಿ, ಉಪಾಧ್ಯಕ್ಷ ಬಸವರಾಜ ಎಂ. ಕುಂಬಾರ, ಪ್ರಧಾನ ಕಾರ್ಯದರ್ಶಿ ಎಮ್. ಪಿ.ಕುಂಬಾರ, ಶಂಕರ ಕುಂಬಾರ ಮತ್ತು ಎಸ್. ಎಸ್ ಅಂಗಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article