ಸಿಡಗಿನಮೊಳೆಯಲ್ಲಿ ಓಕಾಂರೇಶ್ವರ ರಥೋತ್ಸವ

MK HasiruKranti
ಸಿಡಗಿನಮೊಳೆಯಲ್ಲಿ ಓಕಾಂರೇಶ್ವರ ರಥೋತ್ಸವ
WhatsApp Group Join Now
Telegram Group Join Now
ಬಳ್ಳಾರಿ, ಏ.04:  ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ಹಂಪೆ ಹುಣ್ಣಿಮೆ ಪ್ರಯುಕ್ತವಾಗಿ ಗ್ರಾಮದ ಆರಾಧ್ಯ ದೈವ ಶ್ರೀ ಓಂಕಾರೇಶ್ವರ ತಾತನವರ ಜಾತ್ರೆ ನಿನ್ನೆ ಜರುಗಿತು
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಕಲ ಮಂಗಳವಾದ್ಯಗಳೊಂದಿಗೆ ಪುರವಂತರಿಂದ ವೀರಭದ್ರ ದೇವರ ಪವಾಡಗಳನ್ನು ಒಡುಪಿನ ಮೂಲಕ ಹೇಳುತ್ತಾ ಗ್ರಾಮದ ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಗಂಗೆಯನ್ನು ತಂದು ಶ್ರೀ ಕಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕವನ್ನು ಮಾಡಲಾಯಿತು.
ಸಂಜೆ ಶ್ರೀ ಓಂಕಾರೇಶ್ವರ ಹೂವಿನ ರಥೋತ್ಸವಕ್ಕೆ ವಿವಿಧ ರೀತಿಯ ಪುಷ್ಪ ಗಳಿಂದ ಅಲಂಕಾರ ಗೊಳಿಸಿ ಶ್ರೀ ತಾತನವರ ಬೆಳ್ಳಿಯ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಇರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ನೆರೆದ ಸುತ್ತಮುತ್ತಲಿನ ಗ್ರಾಮಸ್ಥರೂ ಪಾಲ್ಗೊಡು ಭಕ್ತಿ ಭಾವದಿಂದ ಎಳೆಯಲಾಯಿತು
WhatsApp Group Join Now
Telegram Group Join Now
Share This Article