ಬಳ್ಳಾರಿ ಅ ೧೯. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ ಸುಮಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನೂರಾರು ಎಕ್ಕರೆ ಭತ್ತ ಹಾನಿಯಾಗಿದ್ದು ಸ್ಥಳಕ್ಕೆ ಯಾವುದೇ ಒಬ್ಬ ಅಧಿಕಾರಿಯು ಬೆಳೆ ನಷ್ಟವಾದಂತಹ ಜಮೀನುಗಳ ಸ್ಥಳಕ್ಕೆ
ಬಂದಿರುವುದಿಲ್ಲ. ಇವತ್ತು ಈ ವಿಜಯನಗರ ಜಿಲ್ಲೆಯಲ್ಲಿ ಅಧಿಕಾರಿಗಳು ಪೋನ್ ಕರೆ ಮಾಡಿದಾಗ, ಪೋನ್ ಕರೆ ಸ್ವೀಕರಿಸುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಒಮ್ಮೆ ಕರೆಯನ್ನು ಸ್ವೀಕರಿಸಿ ಹೊಸಪೇಟೆ ಭಾಗದಲ್ಲಿ ಮತ್ತು ಕಮಲಾಪುರ ಭಾಗದಲ್ಲಿ ಮತ್ತು ಮರಿಯಮ್ಮನಹಳ್ಳಿ ಭಾಗದಲ್ಲಿ ಸಿಬ್ಬಂದಿಗಳ ಕೊತರೆ ಇದ್ದು, ಇಲ್ಲಿ ಕೆಲಸ ನಿರ್ವಹಿಸುವವರು ಒಬ್ಬರೆ ಇದ್ದಾರೆ, ಹಾಗಾಗಿ ನಮಗೆ ಎಲ್ಲಾ ಕಡೆಗಳಲ್ಲಿ ಸಂಚರಿಸುವುದಕ್ಕೆ ಸಮಯಾವಕಾಶ ಬೇಕು. ತುರ್ತುಗತಿಯಲ್ಲಿ ಮಾಡಲು ಬರುವುದಿಲ್ಲ ಎಂದು ಹೇಳಿರುತ್ತಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೈತರು ಜೊತೆಗೂಡಿ, ರೈತರು ಬೆಳೆನಷ್ಟ ಆದಂತಹ ಜಮೀನುಗಳಿಗೆ
ಬೇಟಿ ನೀಡಿದ್ದು, ರೈತರಿಗೆ ದೈರ್ಯ ತುಂಬುವಂತಹ ಕೆಲಸ ಮಾಡಿ ಇಂದು ಅಧಿಕಾರಿಗಳು ಮತ್ತು ಇಲ್ಲಿನ ಶಾಸಕರು ಯಾವುದೇ ಕ್ರಮ
ತೆಗೆದುಕೊಂಡಿರುವುದಿಲ್ಲ. ಹಾಗೂ ಕಮಲಾಪುರ ಹೋಬಳಿಯಲ್ಲಿ ನಿರಂತರ ಮಳೆಯಿಂದಾಗಿ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳಾ, ಸಜ್ಜೆ, ಸೂರ್ಯಕಾಂತಿ, ಇನ್ನಿತರೆ ಬೆಳೆಗಳಿಗೆ ಮಳೆಯಿಂದ ತುಂಬಾ ಹಾನಿಯಾಗಿ, ರೈತರು ತುಂಬಲಾರದ ನಷ್ಟವನ್ನು ಭರಿಸುತ್ತಿದ್ದಾರೆ. ಮತ್ತು ಒಂದು ಎಕರೆಗೆ ಸುಮಾರು ೪೦ ರಿಂದ ೫೦ ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಿದ್ದು, ಖರ್ಚು ಮಾಡಿದಂತಹ ಹಣವು ರೈತನಿಗೆ ಇವತ್ತು ವಾಪಸ್ಸು ಬರುತಿಲ್ಲ. ಆದಕಾರಣ ರೈತರ ಹೊಲ ಗದ್ದೆಗಳಿಗೆ ತೆರಳಿ, ಕೃಷಿ ಇಲಾಖೆ
ಮತ್ತು ಕಂದಾಯ ಇಲಾಖೆಯವರು ಪರಿಶೀಲನೆ ನಡೆಸಿ ಬೆಳೆ ನಷ್ಟ ಆದಂತಹ ಜಮೀನುಗಳಿಗೆ ಬೇಟಿ ನೀಡಿ ಸೂಕ್ತ ಪರಿಹಾರ ೧ ಎಕರೆಗೆ
ರೂ.೫೦,೦೦೦/- ಬೆಳೆ ನಷ್ಟ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಮುತುವರ್ಜಿ ವಹಿಸಿ ಮತ್ತು ಶಾಸಕರು ಸಹ ರೈತರ ಕಡೆಗೆ ಗಮನಹರಿಸಿ ಇದಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಬೇಕೆಂದು ರೈತರ ಮನವಿ.
ಸುಮಾರು ಸಕ್ಕರೆ ಕಾರ್ಖಾನೆ ೮ ರಿಂದ ೯ ವರ್ಷಗಳಿಂದ ಮುಚ್ಚಿ ಹೋಗಿದ್ದು, ರೈತರು ಸುಮಾರು ೮೦% ರೈತರು ಭತ್ತ, ಮತ್ತು ಬಾಳೆ,
ಕಡೆಗೆ ಮುಖ ಮಾಡಿದ್ದು, ಒಂದು ಎಕರೆಗೆ ಸುಮಾರು ೪೦ ರಿಂದ ೫೦ ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಿದ್ದು, ಮೇ ತಿಂಗಳಲ್ಲಿ ಅಕಾಲಿಕ ಮಳೆಗೆ ನೂರಾರು ಎಕರೆ ಬಾಳೆ ಬೆಳೆ ನಷ್ಟವಾಗಿದ್ದು, ಇಲ್ಲಿಯವರೆಗೂ ಒಂದು ರೂಪಾಯಿ ಸಹ ಬೆಳೆ ನಷ್ಟ ಪರಿಹಾರ ಬಂದಿರುವುದಿಲ್ಲ. ಈ ಕೂಡಲೇ ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಬೇಕು. ಇದು ಹಿಂದೆ ಕಾಂಗ್ರೆಸ್ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭ ಮಾಡುತ್ತೇವೆಂದು ಮಾತು ನೀಡಿರುತ್ತಾರೆ. ಸರ್ಕಾರ ಜಾರಿಗೆ ಬಂದು ಒಂದುವರೆ ವರ್ಷ ಕಳೆದರು ಯಾರೊಬ್ಬ ಶಾಸಕರಾಗಲಿ, ಸಚಿವರಾಗಲಿ, ಸಂಸದರಾಗಲಿ, ಇಲ್ಲಿನ ಅಧಿಕಾರಿಗಳಾಗಲಿ ಸಕ್ಕರೆ ಕಾರ್ಖಾನೆ ಬಗ್ಗೆ ರೈತರ ಬಗ್ಗೆ ಮುತುವರ್ಜಿ ವಹಿಸಿರುವುದಿಲ್ಲ. ಸುಮಾರು ಹೊಸಪೇಟೆ ಭಾಗದಲ್ಲಿ ೮೦% ಭತ್ತ ಬೆಳೆದು
ನಷ್ಠವಾಗಿದ್ದು ಸಕ್ಕರೆ ಕಾರ್ಖಾನೆ ಇದ್ದಲ್ಲಿ ಈ ನಷ್ಟವನ್ನು ಆಗುತ್ತಿರಲಿಲ್ಲ. ಹೊಸಪೇಟೆಯಿಂದ ಬೇರೊಂದು ಕಡೆಗೆ ಕಬ್ಬನ್ನು ಸಾಗಿಸಲು ಸುಮಾರು ೮೦೦ ರಿಂದ ೧೦೦೦ ಒಂದು ಟನ್‌ಗೆ ಖರ್ಚು ಆಗುತ್ತದೆ. ಆದಕಾರಣ ಇಲ್ಲಿನಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು ಈ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಟಿ.ನಾಗರಾಜ್ ಜಿಲ್ಲಾಧ್ಯಕ್ಷರು, ಸಣ್ಣಕ್ಕಿ ರುದ್ರಪ್ಪ ತಾಲೂಕು ಅಧ್ಯಕ್ಷರು, ಕೆ.ರಾಮಾಂಜಿನಿ ತಾಲೂಕು ಉಪಾಧ್ಯಕ್ಷರು, ಜಾಕೀರ್ ಹುಸೇನ್ ತಾಲೂಕು ಉಪಾಧ್ಯಕ್ಷರು, ಕಲ್ಮಂಗಿ ರಮೇಶ್, ಯಮುನಪ್ಪ, ಹನುಮಂತಪ್ಪ, ನಾರಾಯಣಿ, ಗಂಟೆ ಮಂಜುನಾಥ, ದಾರಾಸಿಂಗ್, ಮಂಜುನಾಥಸಿಂಗ್, ದಂಡಿ ಮಂಜುನಾಥ, ಕಾಸಿನಾಥ ಬಸವನದುರ್ಗ, ಇನ್ನಿತರೆ ಹಲವಾರು ರೈತ ಮಿತ್ರರು ಭಾಗಿಯಾಗಿ ಬೆಳೆ ನಷ್ಟ ಸಮೀಕ್ಷೆಗೆ ಹಾಜರಿದ್ದರು.