ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ, ವ್ಯಕ್ತಿಯೊಬ್ಬರು ಜೀವಂತವಿದ್ದರೂ ಅವರ ಮರಣ ಪ್ರಮಾಣಪತ್ರ ನೀಡಿದ ಘಟನೆಯೊಂದು ಬೆಳಿಕಿಗೆ ಬಂದಿದೆ.
ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಕೊಡಲು ಮುರಗೋಡ ಕೃಷಿ ಇಲಾಖೆಗೆ ಹೋದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದ ಈಶ್ವರ ನಾಗಪ್ಪ ಅಬ್ಬಾಯಿ ಎಂಬವರು ಜೀವಂತವಿದ್ದರೂ ಗ್ರಾಮಲೇಕ್ಕಾಧಿಕಾರಿ ನೀಲಾ ಮೂರಗೋಡ(ಬಾನಿ) ಎಂಬುವರ ಎಡವಟ್ಟಿನಿಂದ ಇವರ ಮರಣ ಹೊಂದಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ದಾಖಲಾಗಿದೆ. ಈ ನೊಂದ ವ್ಯಕ್ತಿ ದೋಷ ಸರಿಪಡಿಸುವಂತೆ ಮುರಗೋಡ ನಾಡ ಕಚೇರಿ ಹಾಗೂ ಸವದತ್ತಿ ತಹಶೀಲ್ದಾರ್ ಚೇರಿಗಳಿಗೆ 5 ತಿಂಗಳಿನಿಂದ ಅಲೆದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸುತಗಟ್ಟಿ ಗ್ರಾಮದ ಈಶ್ವರ ನಾಗಪ್ಪ ಅಬ್ಬಾಯಿ ರೈತನ 2021 ರಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಿಲಾಗಿದೆ ಎನ್ನುವ ಮಾಹಿತಿ ಲಬ್ಯವಾಗಿದೆ. ತಾವು ಮಾತ್ರ ಈಗಲೂ ಕೃಷಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ವ್ಯಕ್ತಿ ಮರಣ ಹೊಂದಿದ್ದಾರೆ ಎಂದು 08-07-2021ರಂದು ಮರಣ ಪ್ರಮಾಣಪತ್ರ ದಾಖಲು ಮಾಡಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಇಷ್ಟೇ ಅಲ್ಲದೆ ತಾವು ಮಾಡಿದ ಯಡವಟ್ಟುನ್ನು ಮುಚ್ಚಿ ಹಾಕಲು ಅಧಿಕಾರಿಗಳು ಈ ದಾಖಲೆಯನ್ನು ಸರಿ ಪಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡಿ ನೊಂದ ವ್ಯಕ್ತಿಗೆ ಕಳುಹಿಸಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಅಧೀಕಾರಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

