ಹುನಗುಂದ; ನವೆಂಬರ್ 19ರಂದು ಹಜರತ್ ಸಯ್ಯದ ಮುರ್ತುಜಾ ಷಾ ಖಾದ್ರಿ ದರ್ಗಾ ಅಭಿವೃದ್ದಿ ಹೋರಾಟ ಸಮೀತಿಯಿಂದ ಹಾಜಿ ಮಲೀಕಸಾಬ ಬೀಳಗಿ ಮತ್ತು ರೀಯಾಜ್ ಭನ್ನು ಇವರ ನೇತೃತ್ವದಲ್ಲಿ ಇಳಕಲ್ಲ ತಾಲೂಕಿನ ತಹಶೀಲ್ದಾರ ಹಾಗೂ ಹಜರತ್ ಸಯ್ಯದ್ ಮುರ್ತುಜಾ ಷಾ ಖಾದ್ರಿ ದರ್ಗಾದ ಆಡಳಿತ ಅಧಿಕಾರಿಗಳಾದ ಶ್ರೀಅಮರೇಶ್ ಪಮ್ಮಾರ್ ಅವರನ್ನು ಭೇಟಿಯಾಗಿ ದರ್ಗಾದ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಮಾಡಲಾಯಿತು.
ದರ್ಗಾಕ್ಕೆ ಬರುವಂತ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮನವಿ ಮಾಡಲಾಯಿತು.
ತಹಶೀಲ್ದಾರ ಅಮರೇಶ ಪಮ್ಮಾರ ಇವರು ಅವಶ್ಯ ಇರುವಂತ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಕೈಗೊಳ್ಳತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದರ್ಗಾ ಶಾದಿ ಮಹಲ್ ಅಬಿವೃದ್ಧಿಗೆ ಮಾನ್ಯ ಜನಪ್ರೀಯ ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ರವರು 1 ಕೋಟಿ ರೂ. ಅನುದಾನ ಮಂಜೂರಿ ಮಾಡಿಸಿರುವದಕ್ಕೆ ಸಮಿತಿಯ ಸದಸ್ಯರು ಅಭಿನಂದಿಸಿದರು. ಸದರಿ ಕಾಮಗಾರಿ ಕೈಗೊಳ್ಳಲು ತಹಶೀಲ್ದಾರ ಕಾರ್ಯಾಮ್ನುಖ ಆಗಲು ವಿನಂತಿಸಿದರು.
ಈ ನಿಯೋಗದಲ್ಲಿ ಮೆಹಬೂಬ ಗೋಡೆಕರ, ಸೈಫಅಲಿ ಕಾಂಟ್ರಾö್ಯಕ್ಟರ್, ಅಸ್ಲಂಸಾಬ್ ಮೋಮಿನ, ಇಮಾಮಹುಸೇನ ಲಟಗೇರಿ, ಯಮನೂರಸಾಬ ದೊಡಮನಿ, ಆರೀಫ್ ಐನೂರ, ಬಾವಾಸಾಬ ಚಿವಲಗಿ, ಅಬ್ಬು ಬಾಗಲವಾಡ, ನೂರ ಕೊಡಗಲಿ, ಕರೀಂ ಕಂಪ್ಲಿ, ಸದ್ದಾಂ ಕೊಡಗಲಿ, ಸಿಕಂದರ ಹುಣಚಗಿ, ಅಜೀಜ ಜಮಾದಾರ, ಛಾವಣಿ ಅನೇಕ ಯುವಕರು ನಿಯೋಗದಲ್ಲಿ ಉಪಸ್ಥಿತರಿದ್ದರು.

