ರಸ್ತೆಯ ನೀಯಮಗಳನ್ನು ಪರಿ ಪಾಲನೆ ಮಾಡುವುದು ಎಲ್ಲರ ಜಾವಾಬ್ದಾರಿ : ಕೋಟೆಪ್ಪ ಕಾಂಬಳೆ

Hasiru Kranti
ರಸ್ತೆಯ ನೀಯಮಗಳನ್ನು ಪರಿ ಪಾಲನೆ ಮಾಡುವುದು ಎಲ್ಲರ ಜಾವಾಬ್ದಾರಿ : ಕೋಟೆಪ್ಪ ಕಾಂಬಳೆ
WhatsApp Group Join Now
Telegram Group Join Now

ಇಂಡಿ: ನಗರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮೀತಿ ಇಂಡಿ ವಕೀಲರ ಸಂಘ ಹಾಗೂ ತಾಲೂಕಾ ಆಡಳಿತ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹವು ಗುರುವಾರರಂದು ಜರುಗಿತು.
ನಗರದ ಕೊರ್ಟ ಆವರಣದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹಕ್ಕೆ ಜೆಎಮ್‌ಎಫ್‌ಸಿ ಹಿರಿಯ ದಿವಾಣಿ ನ್ಯಾಯಾದಿಶ ಹಾಗೂ ತಾಲೂಕಾ ಕಾನೂನು ಸೇವಾ ಸಮೀತಿ ಅಧ್ಯಕ್ಷರಾದ ಕೋಟೆಪ್ಪ ಕಾಂಬಳೆ ಹಸಿರು ನಿಶಾನೆ ತೊರಿಸುವ ಮೂಲಕ ಜಾತಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಕಾರ್ಯಕ್ರಮದ ಉದ್ದೇಶ ನಮ್ಮ ದೇಶದಲ್ಲಿ ಮಹಾಮಾರಿ ಕರೋನಾದಂತ ರೋಗಗಳಿಂದ ಸಾವು ನೋವುಗುಳು ಸಂಭವಿಸಿ ಸಾಕಷ್ಟು ಪ್ರಮಾಣದ ಜೀವಹಾನಿಯಾಗಿವೆ. ಅದರಂತೆ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳಿಂದ ಕೂಡಾ ಸಾವು ನೋವುಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟುವ ಸಲುವಾಗಿ ಇದೇ ಜ.೧ರಿಂದ ಜ.೩೦ ರವರೆಗೆ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಹಮ್ಮಿಕೊಂಡು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅದರಂತೆ ಪ್ರತಿಯೊಬ್ಬರು ಹೇಲ್ಮೆಟ ಧರಿಸುವುದು ರಸ್ತೆಯ ನೀಯಮಗಳನ್ನು ಪರಿ ಪಾಲನೇ ಮಾಡುವ ಮೂಲಕ ರಸ್ತೆ ಸುರಕ್ಷತೆ ಪಾಲನೆ ಮಾಡುವುದು ಎಲ್ಲರ ಜಾವಾಬ್ದಾರಿ ಇದೆ ಎಂದರು.
ತಹಸಿಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿ ರಸ್ತೆ ಬದಿಗಳಲ್ಲಿ ಅಡ್ಡಾ ದಿಡ್ಡಿಯಾಗಿ ಒಡಾಡದೆ ರಸ್ತೆ ಬದಿಗಳಲ್ಲಿ ಸಾಗಬೇಕು ಇದರಿಂದ ಅಪಘಾತಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.
ಜಾತಾವು ನಗರದ ಕೊರ್ಟ ಆವರಣದದಿಂದ ಹೊರಟು ಪ್ರಮುಖ ವೃತ್ತವಾದ ಬಸವೇಶ್ವರ ವೃತ್ತ ಸೇರಿದಂತೆ ಇತರ ಪ್ರಮುಖ ರಸ್ತೆಗಳ ಮೂಲಕ ಜಾಗೃತಿ ಮೂಡಿಸಿದರು.
ಜಾತಾದಲ್ಲಿ ಜೆಎಮ್‌ಎಫ್‌ಸಿ ದಿವಾಣಿ ನ್ಯಾಯಾದಿಶರಾದ ಸುನೀಲಕುಮಾರ ಎಂ.ಎಸ್, ಅಪರ ಸರಕಾರಿ ವಕಿಲರಾದ ಎಸ್.ಆರ್.ಬಿರಾದಾರ, ನ್ಯಾಯವಾದಿಗಳಾದ ಎನ್.ಕೆ.ನಾಡಪುರೋಹಿತ, ಎಸ್.ಬಿ.ನಿಂಬರಗಿಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎ.ಮುಜಾವರ, ರಮಾಬಾಯಿ ಪ್ರೌಡಶಾಲೆ ಮುಖ್ಯಗುರು ನೀಜಣ್ಣಾ ಕಾಳೆ, ಡಾ|| ಪ್ರಶಾಂತ ಧೂಮಗೊಂಡ, ಶಿಕ್ಷಕರಾದ ತುಕರಾಮ ಹೊಸಮನಿ, ವೃತ್ತ ನೀರಿಕ್ಷಕ ಎಚ್.ಎಸ್.ಗುನ್ನಾಪೂರ, ಪೌರಕಾರ್ಮಿಕರು, ಸ್ಥಳಿಯ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಜಾತಾದಲ್ಲಿ ಪಾಲ್ಗೊಂಡು ರಸ್ತೆ ಸುರಕ್ಷತಾ ಬಗ್ಗೆ ಜಾಗೃತಿ ಮೂಡಿಸಿದರು.
ಪೋಟೊ ಕ್ಯಾಪ್ಸನ್ ೦೩ ಇಂಡಿ ೦೧: ನಗರದ ಕೊರ್ಟ ಆವರಣದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹಕ್ಕೆ ಜೆಎಮ್‌ಎಫ್‌ಸಿ ಹಿರಿಯ ದಿವಾಣಿ ನ್ಯಾಯಾದಿಶ ಹಾಗೂ ತಾಲೂಕಾ ಕಾನೂನು ಸೇವಾ ಸಮೀತಿ ಅಧ್ಯಕ್ಷರಾದ ಕೋಟೆಪ್ಪ ಕಾಂಬಳೆ ಹಸಿರು ನಿಶಾನೆ ತೊರಿಸುವ ಮೂಲಕ ಜಾತಾಕ್ಕೆ ಚಾಲನೆ ನೀಡಿದರು.

WhatsApp Group Join Now
Telegram Group Join Now
Share This Article