ರಾಯಬಾಗ: ತಾಲೂಕಿನ ರಾಯಬಾಗ ವಲಯದ ಬೀರೇಶ್ವರ ಗಲ್ಲಿ ಬೃಂದಾವನ ಜ್ಞಾನವಿಕಾಸ ಕೇಂದ್ರದಲ್ಲಿ ಇಂದು ಪೌಷ್ಟಿಕ ಆಹಾರ ಬಳಕೆ ಕಾರ್ಯಕ್ರಮ ಯೋಜನೆ ಮಾಡಲಾಗಿತ್ತು.* ಸದರಿ ಕಾರ್ಯಕ್ರಮವನ್ನು ತಾಲೂಕಿನ ಮಾನ್ಯ ಗೌರವಾನ್ವಿತ ಯೋಜನಾಧಿಕಾರಿಯವರಾದ ಮಹೇಶ್ವರಪ್ಪಾ ಜಿ ಸರ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮದ *ಪ್ರಾಸ್ತಾವಿಕತೆಯನ್ನು ತಾಲೂಕಿನ ಯೋಜನಾಧಿಕಾರಿಯವರಾದ ಮಹೇಶ್ವರಪ್ಪಾ ಜಿ ಸರ್ ಅವರು ಯೋಜನೆಯ ಕಾರ್ಯಕ್ರಮದ ಕುರಿತು ಮಾತನಾಡಿದರು. ನಂತರದಲ್ಲಿ ಕಾರ್ಯಕ್ರಮದ *ಮುಖ್ಯ ಅತಿಥಿಗಳಾದ ಡಾ, ಸೋನಾಲಿ ಬಂತೆ ಅವರು ಮಹಿಳಾ ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಬಳಕೆ* ಎಂಬ ವಿಷಯದ ಕುರಿತು ಮಾಹಿತಿ ನೀಡಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಥಣಿ ಜಿಲ್ಲೆಯ ಜನ ಜಾಗೃತಿ ಸದಸ್ಯರಾದ ವಿದ್ಯಾ ಪೂಜಾರಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಕೇಂದ್ರದ ಸದಸ್ಯರಿಗೆ ಪೌಷ್ಟಿಕ ಆಹಾರ ತಯಾರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಜ್ಯೋತಿ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.