ವೈವಿಧ್ಯತೆಯ ಈ ನಮ್ಮ  ದೇಶದಲ್ಲಿ ಏಕತೆಯ ಹೂ ಅರಳಬೇಕು: ಸಾಹಿತಿ ಡಾ. ಜಯವೀರ ಎ.ಕೆ

Ravi Talawar
ವೈವಿಧ್ಯತೆಯ ಈ ನಮ್ಮ  ದೇಶದಲ್ಲಿ ಏಕತೆಯ ಹೂ ಅರಳಬೇಕು: ಸಾಹಿತಿ ಡಾ. ಜಯವೀರ ಎ.ಕೆ
WhatsApp Group Join Now
Telegram Group Join Now
ರಾಯಬಾಗ: ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಸರ್ವಜನಾಂಗದ ಶಾಂತಿಯ ತೋಟವಾದ  ವೈವಿಧ್ಯತೆಯ ಈ ನಮ್ಮ  ದೇಶದಲ್ಲಿ ಏಕತೆಯ ಹೂ ಅರಳಬೇಕು ಎಂದು ಶಿರಗುಪ್ಪಿಯ ಪ್ರತಿಷ್ಠಿತ ಕೆ ಎಲ್ ಇ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಜಯ ವೀರ ಎ.ಕೆ. ಅಭಿಮತ ವ್ಯಕ್ತಪಡಿಸಿದರು.
ಅವರು ರಾಯಬಾಗ ಪಟ್ಟಣದ ಕೆ ಎಲ್ ಇ ಸಂಸ್ಥೆಯ ಪ್ರತಿಷ್ಠಿತ ಮಲಗೌಡಾ ಪಾಟೀಲ ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದತ್ತುಗ್ರಾಮ ಸುಕ್ಷೇತ್ರ ದಿಗ್ಗೇವಾಡಿಯಲ್ಲಿ ಹಮ್ಮಿಕೊಂಡ  ವಿಶೇಷ ಶಿಬಿರದ ಎರಡನೇ ದಿನವಾದ ಮಂಗಳವಾರ ದಿ. 2 ರಂದು “ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಕರ ಪಾತ್ರ”ವಿಷಯದ ಕುರಿತು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮಲ್ಲಿ ಭಾಷೆ, ವೇಷ, ಆಹಾರ, ಉಡುಗೆ, ತೊಡುಗೆ, ಸಂಪ್ರದಾಯಗಳು ಬೇರೆ ಬೇರೆ ಇದ್ದರೂ ನಾವೆಲ್ಲರೂ ಒಂದು ನಾವೆಲ್ಲರೂ ಬಂಧುಗಳು ಎಂಬ ಗಟ್ಟಿ ಭಾವ ಮೂಡಿಸಿಕೊಂಡು ಜಾತ್ಯತೀತ ತತ್ವಗಳನ್ನು ಎತ್ತಿ ಹಿಡಿಯಬೇಕೆಂದರು. ದಿಗ್ಗೇವಾಡಿ  ಗ್ರಾಮವೂ  ಕೂಡ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಬಗೆಯನ್ನು ಸೋದಾಹರಣವಾಗಿ ವಿಶ್ಲೇಷಣೆ ಮಾಡಿದರು. ಶಾಲಾ ಕಾಲೇಜುಗಳಲ್ಲಿ ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದ್ದರ ಹಿಂದಿನ ಮಹೋನ್ನತ ಉದ್ದೇಶ ಸಮಾನತೆ ಮತ್ತು ಸಹೋದರ ಭಾವ ಎಂಬುದನ್ನು ತಾವೆಲ್ಲರೂ ಚೆನ್ನಾಗಿ ಅರಿತುಕೊಳ್ಳಬೇಕು. ನಿಮ್ಮ ಮನೋಮಂದಿರದಲ್ಲಿ ಸಾಮರಸ್ಯದ ಸದ್ಭಾವನೆಯ ದಿವ್ಯ ಮಂತ್ರ ಅನವರತವೂ ನಿನದಿಸುತ್ತಿರಬೇಕು ಎಂದು ಡಾ.ಜಯವೀರ ಎ. ಕೆ ಮಾರ್ಮಿಕವಾಗಿ ನುಡಿದರು. ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರಂಭದಲ್ಲಿ ಹಲವು ಶಿಬಿರಾರ್ಥಿಗಳು” ರಾಷ್ಟ್ರೀಯ ಭಾವೈಕ್ಯತೆ” ಕುರಿತು ತಮ್ಮ ಮನದಾಳದ ಅಭಿಪ್ರಾಯಗಳನ್ನು ಸೊಗಸಾಗಿ ಹಂಚಿಕೊಂಡರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮದ ಉದಯೋನ್ಮುಖ  ಚುಟುಕು ಕವಿ, ಶಿಕ್ಷಕ ಜ್ಯೋತಿ ರುಪ್ಪಾಳೆ ಮಾತನಾಡಿ” ಈ ಭವ್ಯ ಭಾರತದ ದೇಶದಲ್ಲಿ ನಾವೆಲ್ಲರೂ ಸಂಕುಚಿತ ಭಾವ ತೊರೆದು ಸಾಮರಸ್ಯದಿಂದ ಬದುಕಿ ಬಾಳಬೇಕು” ಎಂದು ನುಡಿದರು. ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರಾದ ಅಪ್ಪಾಸಾಬ ಬಿ ಮೈಶಾಳೆ ಅಧ್ಯಕ್ಷತೆ ವಹಿಸಿ ಆಶಯ ನುಡಿ ಹಂಚಿಕೊಂಡರು. ಪ್ರೊ ಎಂ ಎಸ್ ಹಂಜೆ,  ರಾಷ್ಟ್ರೀಯ ಸೇವಾ ಯೋಜನೆ ಘಟಕದ  ಕಾರ್ಯಕ್ರಮ ಅಧಿಕಾರಿ  ಎಸ್ ಎ ಖವಟಕೊಪ್ಪ, ಗ್ರಾಮದ ನಾಗರಿಕರಾದ ರಾಜು ಮಿರ್ಜೆ, ಶಿಬಿರದ ನಾಯಕಿ ಕು. ಯೋಗಿತಾ ಪಾಟೀಲ, ಶಿಬಿರದ ನಾಯಕ ಕು. ಜ್ಯೋತಿಬಾ ದೇಸಾಯಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು. ಪ್ರೇಮಾಂಜಲಿ ಬನಗೆ ಸ್ವಾಗತಿಸಿದರು. ಕು. ಅಪೂರ್ವ ಪೂರ್ವಾಂತ  ನಿರೂಪಿಸಿದರು. ಕು. ಯೋಗಿತಾ ಪಾಟೀಲ ವಂದಿಸಿದರು.
WhatsApp Group Join Now
Telegram Group Join Now
Share This Article