ಪೊಟ್ಯಾಷ್ ಯುಕ್ತ ಸಂಯುಕ್ತ ರಸಗೊಬ್ಬರ ಉಪಯುಕ್ತ: ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕ

Ravi Talawar
ಪೊಟ್ಯಾಷ್ ಯುಕ್ತ ಸಂಯುಕ್ತ ರಸಗೊಬ್ಬರ ಉಪಯುಕ್ತ: ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕ
WhatsApp Group Join Now
Telegram Group Join Now
ರಾಯಬಾಗ: ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಮಾರಾಟ ಮಾಡುವಾಗ ಪೊಟ್ಯಾಷ್ ಯುಕ್ತ ಸಂಯುಕ್ತ ರಸಗೊಬ್ಬರಗಳ ಉಪಯುಕ್ತ ಬಗ್ಗೆ ರೈತರಿಗೆ ತಿಳಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕ ಹೇಳಿದರು.
ಗುರುವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಮಾರಾಟಗಾರರು ರೈತರಿಗೆ ಅವಶ್ಯವಿರುವ ಗೊಬ್ಬರ, ಬೀಜಗಳ ದಾಸ್ತಾನು ಮಾಡಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಾರಿ ಭೀಕರ ಬರಗಾಲ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದು, ರೈತರಿಗೆ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಅಂಗಡಿ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ದರಪಟ್ಟಿ ಹಾಗೂ ದಾಸ್ತಾನುಗಳ ಮಾಹಿತಿ ಫಲಕಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಬೇಕೆಂದರು. ಮಾರಾಟಗಾರರ ಸಂಘದ ಅಧ್ಯಕ್ಷ ಶೀತಲ ಕೀರ್ತಿ, ಸಾಯಿನಾಥ ಮೂರಲವಾರ, ಆರ್.ಎಸ್.ದತ್ತವಾಡೆ, ಎ.ಎಸ್.ಚೌಗಲಾ, ಆರ್.ಎಮ್.ಪಾಟೀಲ, ಎಸ್.ಕೆ.ಕುಂಬಾರ, ಮಹೇಶ ಮುಗಳಖೋಡ, ಮಹಾದೇವ ಬೊರಗಾಂವೆ, ಶ್ರೀಧರ ಮೂಡಲಗಿ, ಸಿದ್ದರಾಯ ಕೊಂಕಣಿ, ನಾಗಪ್ಪ ಹುಕ್ಕೇರಿ, ಸಿದ್ರಾಮ ಹೊಸಪೇಟೆ, ಮಹಾಂತೇಶ ಜಂಬಗಿ, ಚನ್ನಪ್ಪ ಕಟಕಬಾವಿ ಸೇರಿದಂತೆ ತಾಲೂಕು ಕೃಷಿ ಪರಿಕರ ಮಾರಾಟಗಾರರು ಇದ್ದರು.
WhatsApp Group Join Now
Telegram Group Join Now
Share This Article