ಮಹಾಲಿಂಗಪುರ : ಹನ್ನೆರಡನೆಯ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ಶರಣರ ಸುವರ್ಣ ಯುಗ ಶತ ಶತಮಾನಗಳಿಂದ ಉಳ್ಳವರ ಬಾಹುಗಳಲ್ಲಿ ಬಂಧಿಯಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಅವರಲ್ಲಿ ಸತ್ಯ ಶುದ್ಧ ಕಾಯಕ ಶರಣರಾಗಿದ್ದವರು ನುಲಿ ಚಂದಯ್ಯನವರು ಎಂದು ಪುರಸಭೆ ಅಧ್ಯಕ್ಷರಾದ ಯಲ್ಲನ್ನಗೌಡ ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಆಯೋಜಿಸಿದ ನುಲಿ ಚಂದಯ್ಯ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಉದ್ಘಾಟಸಿ ಮಾತನಾಡಿ ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಬಿದರಲ್ಲದೆ. ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯತ್ತಿ ಬದುಕುವಂತೆ ಮಾಡಿದರು.ವ್ಯಕ್ತಿಯ ಯೋಗ್ಯತೆ ಹುಟ್ಟಿನಿಂದ ನಿರ್ಧಾರವಾಗಬಾರದು ಅವನ ಗುಣಗಳಿಂದ ಮಾತ್ರ ನಿರ್ಧಾರಿತವಾಗಬೇಕು ಎಂದು ಶರಣರು ಬಯಸಿದರು. ಈ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕ್ರಾಂತಿಗೆ ನಿಸಂದೇಹವಾಗಿ ಬಸವಣ್ಣನೇ ನಾಯಕನಾದರೂ ಅವರೊಂದಿಗೆ ಕೈ ಜೋಡಿಸಿದ ಸಾವಿರಾರು ಶರಣ ಶರಣೆಯರು ತಮ್ಮ ಚಿಂತನೆ ಕಾಯಕಗಳ ಮೂಲಕ ಬಸವಣ್ಣನ ಸಮಗ್ರ ಕ್ರಾಂತಿಯಲ್ಲಿ ಸಹ ಭಾಗಿಗಳಾದರು. ಇಂತಹ ಶರಣರ ಪೈಕಿ ಸತ್ಯ ಶುದ್ಧ ಕಾಯಕಯೋಗಿ ನುಲಿ ಚಂದಯ್ಯನವರು ಒಬ್ಬರು.ಎಂದರು
ನಂತರ ಮಾತನಾಡಿದ ಪುರಸಭೆ ಮ್ಯಾನೇಜರ ಎಸ್.ಎನ್. ಪಾಟೀಲ ನುಲಿ ಚಂದಯ್ಯ ಕಾಯಕದ ಮೂಲಕವೇ ಆತ್ತ್ಮೋನ್ನತಿ ಕಂಡವರು ಅವರು ಒಮ್ಮೆ ಕೆರೆಯ ನೀರಲ್ಲಿ ಹುಲ್ಲು ಕೊಯುವಾಗ ಕೊರಳಲ್ಲಿದ್ದ ಇ?ಲಿಂಗ ಜಾರಿ ನೀರಲ್ಲಿ ಬಿದ್ದು ಹೋಯಿತು ಕಾಯಕದಲ್ಲಿ ಮೈಮರೆತ ಚಂದಯ್ಯ ಅದನ್ನು ಮೇಲೆತ್ತಿಕೊಳ್ಳಲಿಲ್ಲ. ಆದರೂ ಲಿಂಗವೇ ಅವರನ್ನು ಹಿಂಬಾಲಿಸಿತು ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಲಿಂಗದೇವ ಮತ್ತು ಚಂದಯ್ಯನವರ ನಡುವೆ ರಾಜಿ ಮಾಡಿಸಿದ ಮಡಿವಾಳ ಮಾಚಿದೇವರು, ಲಿಂಗವನ್ನು ಸ್ವೀಕರಿಸಲು ಸಲಹೆ ನೀಡುತ್ತಾರೆ.
ಆದರೆ ಚಂದಯ್ಯ ತಾನು ನುಲಿದ ಹಗ್ಗಗಳನ್ನು ಮಾರುವ ಕಾಯಕವನ್ನು ಲಿಂಗದೇವನಿಗೆ ವಹಿಸುತ್ತಾನೆ ಎಂದರು.
ಈ ಸಂದರ್ಭದಲ್ಲಿ ಗಣ್ಯರಾದ ವಿಜಯಕುಮಾರ ಪಾಟೀಲ, ಪಾಪಾ ನಾಲಬಂದ, ಹನಮಂತ ಬಜಂತ್ರಿ, ಚಿದಾನಂದ ಮಠಪತಿ, ಎಂ.ಎಂ ಮುಗಳಖೋಡ, ರವಿ ಬಜಂತ್ರಿ, ರಾಮಣ್ಣ ಹಟ್ಟಿ, ಬಾಬು ಬಜಂತ್ರಿ, ಮಾರುತಿ ದಳವಾಯಿ, ಮಹಾಂತೇಶ ಬಜಂತ್ರಿ, ಶಿವಾನಂದ ಚೌದರಿ, ಪ್ರಕಾಶ ಕಟಾಂವಿ, ಮಲೀಕ ಅಂಬಿ, ಸದಾಶಿವ ಕತ್ತಿ, ಮಹಾಲಿಂಗ ಬಜಂತ್ರಿ, ಪರಸು ಬಜಂತ್ರಿ, ರಾಮು ಮಾಂಗ,ಮಾನಿಂಗ ಮಾಂಗ, ಲಕ್ಷ್ಮೀ ಪರೀಟ ಸೇರಿದಂತೆ ಹಲವರು ಇದ್ದರು.
ಫೋಟೊ: ೧೧ ಎಂ.ಎಲ್.ಪಿ ೨
ಪುರಸಭೆಯಲ್ಲಿ ನುಲಿ ಚಂದಯ್ಯ ಜಯಂತಿ ಆಚರಣೆ ಸತ್ಯ ಶುದ್ಧ ಕಾಯಕ ಯೋಗಿ ನುಲಿ ಚಂದಯ್ಯನವರು : ಯಲ್ಲಣ್ಣಗೌಡ ಪಾಟೀಲ
