ಜಾಗೃತಿ ಮೂಡಿಸಿದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಅಣುಕು ಪ್ರದರ್ಶನ

Ravi Talawar
ಜಾಗೃತಿ ಮೂಡಿಸಿದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಅಣುಕು ಪ್ರದರ್ಶನ
AA
WhatsApp Group Join Now
Telegram Group Join Now
ಗದಗ  ಜುಲೈ 12: ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಪ್ರವಾಹ ಸಂಭವಿಸಿದಾಗ ಉಂಟಾಗುವ ಸಂಕಷ್ಟದಿಂದ ಪಾರಾಗುವ ವಿಧಾನವನ್ನು ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ  ತಂಡದವರು ಅಣುಕು ಪ್ರದರ್ಶನ ಪ್ರಸ್ತುತಪಡಿಸಿ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ನಗರದ ಭೀಷ್ಮಕೆರೆ ಆವರಣದಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ  ತಂಡದೊಂದಿಗೆ ಆಯೋಜಿಸಲಾದ ಅಣುಕು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಜಿಲ್ಲಾ ಮಟ್ಟದ ವಿವಿಧ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು (ಸಾರ್ವಜನಿಕರನ್ನು) ಪಾರು ಮಾಡುವುದಲ್ಲದೇ ತುರ್ತು ಪರಿಸ್ಥಿತಿಗನುಸಾರವಾಗಿ ಅವರ ಆರೋಗ್ಯ ರಕ್ಷಣೆಯ ಕಾರ್ಯಾಚರಣೆಗೂ ಕೂಡ ಮುಂದಾಗಲಿವೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್‍ಡಿಆರ್‍ಎಫ್ ) ಮುಖ್ಯಸ್ಥರಾದ  ಇನ್ಸ ಪೆಕ್ಟರ್  ಗೋಪಾಲ ಕೃಷ್ಣ ಅವರು ಮಾತನಾಡಿ ಪ್ರವಾಹ ಸಂದರ್ಭ ಉಂಟಾದಾಗ ನಾಗರೀಕರ ಪ್ರಾಣ ರಕ್ಷಣೆಗಾಗಿ ನಮ್ಮ ತಂಡವು ಸದಾ ಸನ್ನದ್ಧವಾಗಿ   ಕಾರ್ಯನಿರ್ವಹಿಸುತ್ತದೆ ಎಂದರು.
ಈ ಅಣುಕು ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಅತೀವೃಷ್ಟಿ ಹಾಗೂ ಪ್ರವಾಹ ಎದುರಾದಾಗ ಸಾರ್ವಜನಿಕರ ಜೀವಹಾನಿ ತಡೆಯುವ ವಿಧಾನ ಹಾಗೂ ಆಸ್ತಿ ಸಂರಕ್ಷಣೆ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಪತ್ತು ನಿರ್ವಹಣಾ ತಂಡದೊಂದಿಗೆ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರೂ ಸಹ ಸಹಕಾರ ನೀಡುವ ಮೂಲಕ ಜೀವ ಹಾನಿ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದರು.
ಈ ಅಣುಕು ಪ್ರದರ್ಶನ ವೀಕ್ಷಿಸಿದ ಜನಸಾಮಾನ್ಯರು ಎನ್‍ಡಿಆರ್‍ಎಫ್ ತಂಡದ ಮೂಲಕ ಜನರ ಜೀವ ರಕ್ಷಣೆಯಲ್ಲಿ ಇತರರಿಗೂ ತಿಳಿಸಿ ಕೊಡುವ ಮೂಲಕ ಜೀವ ಹಾನಿ ಹಾಗೂ ಆಸ್ತಿ ಹಾನಿ ತಡೆಯುವ ಉದ್ದೇಶ ಈ ಅಣುಕು ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಿ.ಎಸ್.ಠಕ್ಕೇಕರ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಶಿವಾನಂದ ರಾಜನಾಳ,  ಎನ್.ಡಿ.ಆರ್.ಎಫ್. ಹಾಗೂ  ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ವೋಡಾಫೋನ್, ಏರಟೆಲ್, ಜಿಯೋ ಬಿಎಸ್‍ಎನ್‍ಎಲ್ ಸೇರಿದಂತೆ ದೂರವಾಣಿ ಸಂಸ್ಥೆಯವರು,  ಎನ್.ಎಸ್.ಎಸ್. ಘಟಕದವರು ಹಾಜರಿದ್ದರು.
WhatsApp Group Join Now
Telegram Group Join Now
Share This Article