ಬಣ್ಣದ ಬದುಕಿನ ಜೊತೆ ರಾಜಕೀಯದಲ್ಲೂ ಸೈ ಎನಸಿಕೊಂಡಿದ್ದ ದಿ.ಎನ್.ಟಿ.ರಾಮರಾವ್

Ravi Talawar
ಬಣ್ಣದ ಬದುಕಿನ ಜೊತೆ ರಾಜಕೀಯದಲ್ಲೂ ಸೈ ಎನಸಿಕೊಂಡಿದ್ದ ದಿ.ಎನ್.ಟಿ.ರಾಮರಾವ್
WhatsApp Group Join Now
Telegram Group Join Now
ಬಳ್ಳಾರಿ :-29/ ಚಲನ ಚಿತ್ರ ರಂಗವಲ್ಲದೇ ರಾಜಕೀಯರಂದಲ್ಲಿ ಕಡಿಮೆ ಸಮಯದಲ್ಲಿ ತಮ್ಮದೇ ಛಾಪು ಮೂಡಿಸದ ವಿಶ್ವದ ಏಕೈಕ ನಾಯಕ  ಎನ್.ಟಿ ರಾಮರಾವ್ ಎಂದು ಮಹಾನಗರವಪಾಲಿಕೆ ಮಾಜಿ ಮಹಾ ಪೌರರು ಹಾಗೂ ಸದಸ್ಯರಾದ ಎಂ. ರಾಜೇಶ್ವರಿ ಸುಬ್ಬರಾಯಿಡು  ತಿಳಸಿದ್ದಾರೆ.
ಬಳ್ಖಾರಿಯ ಹವಂಬಾವಿಯ ವಿಜಯ ದುರ್ಗ ಕಾಂಪೌಡನಲ್ಲಿ. ಭೀಮನೇನಿ ಸಹೋದರರು ಹಾಗೂ ರಘುರಾಮ್ ಕಲಾಮಿತ್ರ ಬೃಂದ ಜಂಟಿಯಾಗಿ ನಂದ ಮೂರಿ ತಾರಕ ರಾಮಾರಾವ್ 101 ನೇ ಜಯಂತಿ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಿ.ತಾರಕ ರಾಮರಾವ್ ಪುತ್ಧಳೀಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ಶ್ರೀಮತಿ ರಾಜೇಶ್ವರಿ
ಸುಬ್ಬರಾಯಿಡು.ರಾಮರಾವ್ ಚಲನ ಚಿತ್ರರಂಗಸಲ್ಲಿ ತೆಲುಗು ಭಾಷಿಗರ ಆರಾದ್ಯ ದೈವವಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ.ಚಿತ್ರರಂಗ ರೀತಿಯಲ್ಲಿ ರಾಜಕೀಯ ರಂಗದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಪ್ರಸಿದ್ದಿ ಹೊಂದಿದ್ದ  ಶ್ರೀಯುತರು.ನಮ್ಮ ಕುಟುಂಬಕ್ಕೂ ಅವರಿಗೂ ರಾಜಕೀಯ ಅವಿನಾಭ ಸಂಬಂದ ಹೊಂದಿದ್ದರು. ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ ಎಂದರು.
ಭೀಮನೇನಿ ಸಹೋದರರಾದ  ಪ್ರಸಾದ್ ಹಾಗೂ ಭಾಸ್ಕರ ಮಾತನಾಡಿ. 1985 ನಮ್ಮ ದೊಡ್ಡಪ್ಪ ಭೀಮನೇನಿ ಕೊಂಡಯ್ಯ ನವರು ಹೊಸಪೇಟೆ ವಿಧಾನ ಸಭಾ ಕ್ಷೇತ್ರದ ಜನತಾ ಪಾರ್ಟಿ ಯಿಂದ ಅಭ್ಯರ್ಥಿ ಯಾಗಿ ಸರ್ದಿಸಿದ್ದ ಸಮಯದಲ್ಲಿ ಅಂದಿನ ಅಂದ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ ರಾಮರಾವ್ ಹಾಗೂ ಅಂದಿನ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ  ಪ್ರಚಾರಕ್ಕಾಗಿ ಹೊಸಪೇಟೆಗೆ ಅಗಮಿಸಿ  ಸಾರ್ವಜನಿಕ ಸಭೆಯಲ್ಲಿ ಮತಯಾಚನೆ  ಮಾಡಿದ್ದರು ಅಂದು ಭೀಮನೇನಿ ಕೊಂಡಯ್ಯ ನವರ 18500 ಅಂತರ ಮತಗಳಿಂದ ಮತಗಳ ಅಂತರದಲ್ಲಿ ವಿಜಯ ಶಾಲಿ ಯಾಗಿದ್ದರು‌  ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿ.ಎನ್.ಟಿ ರಾಮರಾವ್ ರವರು ಅಭಿನಯಿಸಿದ ಸಾಮಾಜಿಕ ಹಾಗೂ ಪೌರಾಣಿಕ ಚಲನ ಚಿತ್ರದ ಗೀತೆಗಳು.ಹಾಗೂ ಪದ್ಯಗಳು ಮತ್ತು.ಅಣುಕುಸಂಭಾಷಣೆಗಳನ್ನು.ವಲಿಅಹಮ್ಮದ್.ಕಾಳಿದಾಸ್.ನೇತಿರಾಘುರಾಮ್.ರಾಮಬ್ರಹ್ಮ..ಜಿ.ವೆಂಕಟೇಶ.ರಾಜಸಿಂಹ.ಇವರುಗಳು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿಭೀಮಮನೇನಿರಂಗಯ್ಯ.ನರೇಂದ್ರ.ಎರ್ರಿಸ್ವಾಮಿ ರಾಜಶೇಖರ. ಮಹೇಂದ್ರ. ಉದ್ಯಮಿ.ಟಿ.ಶ್ರೀನಿವಾಸ ಕಂಟಮನೇನಿ ರಾಮು.ತಾತನೇನಿ ಶ್ರೀನಿವಾಸ. ಸಾರಿಗೆ ಇಲಾಖೆ ಯ ನಿವೃತ್ತ ಅಧಿಕಾರಿ ವೆಂಕಟೆಶ್ವರ ರಾವ್ ಸೇರಿದಂತೆ ಹವಂಭಾವಿ ಪ್ರದೇಶದ ಹಾಗೂ ಎನ್.ಟಿ.ರಾಮರಾವ್ ಅಭಿಮಾನಿ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮ ದ ನಿರೂಪಣೆ. ಶ್ರೀನಿವಾಸ ರೆಡ್ಡಿ. ವಂದರ್ನಾಪಣೆ ಯನ್ನು  ಪುರುಷೋತ್ತಮಹಂದ್ಯಾಳು ನಡೆಸಿಕೊಟ್ಟರು.
WhatsApp Group Join Now
Telegram Group Join Now
Share This Article