ಡಿಸೆಂಬರ್ 3 ರಿಂದ 5 ರವರೆಗೆ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಕ್ಯಾಂಪ್

Ravi Talawar
ಡಿಸೆಂಬರ್ 3 ರಿಂದ 5 ರವರೆಗೆ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಕ್ಯಾಂಪ್
WhatsApp Group Join Now
Telegram Group Join Now

ಗದಗ: ನವೆಂಬರ್ 25: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಟುಂಬ ಕಲ್ಯಾಣ ವಿಭಾಗ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 3 ರಿಂದ 5 ರವರೆಗೆ ಎಲ್ಲಾ ತಾಲೂಕುಗಳ ತಾಲೂಕಾ ಆಸ್ಪತ್ರೆಯಲ್ಲಿ ಪುರುಷ ಸಂತಾನ ಹರಣ ಚಿಕಿತ್ಸೆಯ ಕ್ಯಾಂಪಗಳನ್ನು ಆಯೋಜಿಸಲಾಗಿದೆ.

ಈ ಕ್ಯಾಂಪನಲ್ಲಿ ತಮಗೆ ಇನ್ನು ಮುಂದೆ ಮಕ್ಕಳು ಬೇಡವೆಂದು ನಿರ್ಧರಿಸಿದ ಅರ್ಹ ದಂಪತಿಗಳು, ಪತ್ನಿಯು ಧೀರ್ಘಕಾಲಿಕ ಖಾಯಿಲೆಗಳಿಂದ ಬಳಲುತ್ತಿದ್ದರೆ ಅಥವಾ ಪತ್ನಿಗೆ 2 ರಿಂದ 3 ಬಾರಿ ಸಿಜೇರಿಯನ ಶಸ್ತçಚಿಕಿತ್ಸೆಯಾಗಿದ್ದರೆ ಅಥವಾ ಪತ್ನಿಗೆ ಬೇರೆ ಯಾವುದಾದರೂ 2-3 ಬಾರಿ ಶಸ್ತçಚಿಕಿತ್ಸೆಯಾಗಿದ್ದರೆ ಅಂತಹ ಪತ್ನಿಯ ಪತಿಯು ಎನ್,ಎಸ್,ವಿ ಶಸ್ತç ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.

ಈ ಚಿಕಿತ್ಸೆಯು ಗಾಯವಿಲ್ಲದೆ ಹೊಲಿಗೆವಿಲ್ಲದೆ ಕೇವಲ 5 ರಿಂದ 10 ನಿಮಿಷ ಸಮಯದಲ್ಲಿ ಮಾತ್ರ ಮುಗಿಯುತ್ತದೆ. ಪುರುಷರಿಗೆ ಇದು ಒಂದು ಸರಳ ಸುರಕ್ಷಿತ ಹಾಗೂ ಶಾಶ್ವತ ಕುಟುಂಬ ಯೋಜನೆಯ ವಿಧಾನವಾಗಿದೆ. ಅರ್ಹ ದಂಪತಿಗಳು ಈ ಒಂದು ಕುಟುಂಬ ಯೋಜನೆಯು ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article