ಕಾಗವಾಡ : ಪ್ರಾಚೀನ ಯುಗದಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಸಮಾಜದಲ್ಲಿತ್ತು ಆದರೆ ಇಗ ಬದಲಾವಣೆಯಾಗಿ ಉದ್ಯೋಗ ಮನುಷ್ಯ ಲಕ್ಷಣಂ ಆಗಿದೆ ಮನಸ್ಸು ಮಾಡಿದ್ದಾರೆ ಯಾವ ಉದ್ಯೋಗವನ್ನು ಯಾರು ಬೇಕಾದರು ಹೆಣ್ಣು ಅಥವಾ ಗಂಡುಮಕ್ಕಳು ಮಾಡಬಹುದು ಆದರೆ ಮನಸ್ಸು ಬೇಕು ಅದನ್ನು ಕಲ್ಪಿಸಿಕೊಡುವಂತ ಕೆಲಸವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮೇಡಂ ಹೇಳಿದರು.
“ಈಗ ಉದ್ಯೋಗ ಮನುಷ್ಯ ಲಕ್ಷಣಂ ಆಗಿದೆ”

ಅವರು ಮಂಗಳವಾರ ತಾಲ್ಲೂಕಿನ ಐನಾಪುರ ಪಟ್ಟಣದ ವಿಠ್ಠಲರುಕ್ಷ್ಮಿಣಿ ದೇವಸ್ಥಾನ ಸಭಾ ಭವನದಲ್ಲಿ ನಡೆದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಗವಾಡ ಹಾಗೂ ಮಹಿಳಾ ಜ್ಞಾನ ವಿಕಾಸ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ ಯಕ್ರಮವನ್ನು ದ್ವೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಮಹಿಳೆಯು ತನ್ನಲ್ಲಿ ಒಂದಲ್ಲ ಒಂದು ಕೌಶಲ್ಯವನ್ನು ಹೊಂದಿರುತ್ತಾಳೆ, ಅದಕ್ಕೆ ಸರಿಯಾದ ಪ್ರೇರಣೆ ದೊರೆತಾಗ ಯಶಸ್ವಿ ಮಹಿಳೆಯಾಗಿ ಹೊರಹೊಮ್ಮಲು ಸಾಧ್ಯವಿದೆ, ಸ್ವ ಉದ್ಯೋಗ ಕ್ಕೆ ಪೂರಕವಾಗಿ ಹಲವಾರು ಅವಕಾಶಗಳು ಇದೆ ಅದನ್ನು ಮಹಿಳೆಯರು ಉಪಯೋಗಿಸಿಕೊಳ್ಳುವ ಸಾವಲಂಬಿ ಬದುಕಿಗೆ ಮುನ್ನುಡಿ ಇಡಬೇಕು. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ ಉದ್ಯೋಗಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ತಿಳಿಸಿದರು.
ಇನೋರ್ವ ಅತಿಥಿಗಳಾದ ಪಪಂ ಸದಸ್ಯಅರುಣ ಗಾಣಿಗೇರ ಮಾತನಾಡಿ ಮಹಿಳೆಯರು ಅಬಲೆಯರಲ್ಲ. ಅವರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮೊದಲೆಲ್ಲಾ ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಇರಲಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅವರಲ್ಲಿ ಉಳಿತಾಯ ಮನೋಭಾವ ಬೆಳೆಸಿದೆ. ಹೆಣ್ಣು ಮಕ್ಕಳು ಸೋಲಿಗೆ ಹೆದರದೆ ಮುನ್ನುಗ್ಗಬೇಕು. ಮಹಿಳೆಯರಿಗೆ ಜ್ಞಾನ, ಆರ್ಥಿಕ ಶಕ್ತಿ, ಕೌಶಲ ಬೇಕು. ಗುರಿ ಮುಟ್ಟುವ ಛಲ ಬೆಳೆಸಿಕೊಳ್ಳಬೇಕುಎಂದ ಅವರು ವೀರೇಂದ್ರ ಹೆಗಡೆ ನೇತೃತ್ವದ ಈ ಯೋಜನೆಯು ಕಲ್ಪವೃಕ್ಷದಂತೆ ಸಾವಿರಾರು ಜನರಿಗೆ ಆಸರೆ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಟ್ಟಂತ ಈ ಯೋಜನೆಯಾಗಿದ್ದು ಉತ್ತಮ ಸೇವಾ ಕಾರ್ಯ ಮಾಡುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಥಣಿ ಜೆ .ಎ.ಪಿಯು ಕಾಲೇಜನ ಕನ್ನಡ ಉಪನ್ಯಾಸಕಿ ಡಾ.ಪ್ರಿಯವಂದಾ ಹುಲಗಬಾಳಿ ಆಧುನಿಕ ಜಗತ್ತಿನಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷ ಕಸ್ತೂರಿ ಮಡಿವಾಳ ವಹಿಸಿದರು.
ಇ ವೇಳೆ ಕಾಗವಾಡ ತಾಲ್ಲೂಕಿನ ಸ್ವಸಹಾಯ ಸಂಘ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇ ಸಂದರ್ಭದಲ್ಲಿ ಧಾರವಾಡ ಜ್ಞಾನ ವಿಕಾಸ ಸುಧಾ ನಾಯಿಕ, ಸುಭಾಷ ಲೋಂಡೆ, ಅರವಿಂದ ಕಾರ್ಚಿ, ಐನಾಪುರ ವಲಯ ಮೇಲ್ವಿಚಾರಕಿ ಸವಿತಾ ದೇಸಾಯಿ ಶಿವು ಶಿಪ್ಪರಮಟ್ಟಿ, ವಲಯದ ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು,ತಾಲೂಕಾ ವಿಚಕ್ಷಣಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಮಹಿಳೆಯರು ಇತರರು ಇದ್ದರು. ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು.ತಾಲೂಕಾ ಯೋಜನಾಧಿಕಾರಿ ಸಂಜೀವ ಮರಾಠಿ ನಿರೂಪಿಸಿ ವಂದಿಸಿದರು.

