ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಲಚ್ಯಾಣದಲ್ಲಿ ತಾತ್ಕಾಲಿಕವಾಗಿ ರೈಲು ನಿಲುಗಡೆಗೆ ಸೂಚನೆ

MK HasiruKranti
ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಲಚ್ಯಾಣದಲ್ಲಿ ತಾತ್ಕಾಲಿಕವಾಗಿ ರೈಲು ನಿಲುಗಡೆಗೆ ಸೂಚನೆ
WhatsApp Group Join Now
Telegram Group Join Now

ಇಂಡಿ: ತಾಲೂಕಿನ ಲಚ್ಯಾಣದಲ್ಲಿ ಜರುಗಲಿರುವ ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ಗೋಲಗುಂಬಜ್ ಮತ್ತು ಬಸವ ಎಕ್ಸಪ್ರೆಸ್ ರೈಲುಗಳು ಏಪ್ರಿಲ್ ೬ ರಿಂದ ೧೨ರ ವರೆಗೆ ತಾತ್ಕಾಲಿಕವಾಗಿ ನಿಲುಗಡೆಗೆ ರಾಜ್ಯ ರೇಲ್ವೆ ಸಚಿವ ವಿ. ಸೋಮಣ್ಣ ಸಂಬಂದಿಸಿದ ರೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿತ್ಯ ಮೈಸೂರಿನಿಂದ ಆಂಧ್ರಪ್ರದೇಶ, ಕಲಬುರಗಿ, ಸೋಲಾಪುರ, ಲಚ್ಯಾಣ, ವಿಜಯಪುರ ಮಾರ್ಗದ ಮೂಲಕ ಬಾಗಲಕೋಟ ನಿಲ್ದಾಣ ತಲುಪುವ ಬಸವ ಎಕ್ಸಪ್ರೆಸ್ ರೈಲು ಬೆಳಿಗ್ಗೆ ೭.೨೩ಕ್ಕೆ ಲಚ್ಯಾಣದಲ್ಲಿ ನಿಲುಗಡೆಯಾಗಿ ೭.೨೪ಕ್ಕೆ ಸಂಚರಿಸಲಿದೆ. ಇದೇ ರೈಲು ಮರಳಿ ಇದೇ ಮಾರ್ಗದ ಮೂಲಕ ಸಂಚಾರಿಸಿ ಲಚ್ಯಾಣದಲ್ಲಿ ಸಂಜೆ ೫.೨೯ಕ್ಕೆ ನಿಲುಗಡೆಯಾಗಿ ೫.೩೦ಕ್ಕೆ ಸಂಚರಿಸಲಿದೆ.

ಇದಲ್ಲದೆ ನಿತ್ಯ ಮೈಸೂರಿನಿಂದ ತುಮಕೂರು, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಲಚ್ಯಾಣ, ಸೋಲಾಪುರ ಮಾರ್ಗದ ಮೂಲಕ ಪಂಡರಾಪುರ ತಲುಪುವ ಗೋಲಗುಂಜ್ ಎಕ್ಸಪ್ರೆಸ್ ರೈಲು ಬೆಳಿಗ್ಗೆ ೮.೨೯ಕ್ಕೆ ನಿಲುಗಡೆಯಾಗಿ ೮.೩೦ಕ್ಕೆ ಹೊರಡಲಿದೆ. ಸಂಜೆ ೪.೧೯ಕ್ಕೆ ನಿಲುಗಡೆಯಾಗಿ ೪.೨೦ಕ್ಕೆ ಹೊರಡಲಿದೆ.

ರಾಜ್ಯ, ಹೊರರಾಜ್ಯದ ಭಕ್ತರ ಅನುಕೂಲಕ್ಕಾಗಿ ಬಂಥನಾಳ ಹಾಗೂ ಲಚ್ಯಾಣ ಮಠದ ಪ್ರಸ್ತುತ ಪೀಠಧೀಶರಾದ ಶ್ರೀ ಡಾ. ಪೂಜ್ಯ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಅಪ್ಪಣೆಯ ಮೇರೆಗೆ ಯುವ ದುರೀಣ ಮಂಜುನಾಥ ವಂದಾಲ ನೇತೃತ್ವದಲ್ಲಿ ಗ್ರಾಮಸ್ಥರು ಸಲ್ಲಿಸಿದ ಮನವಿ ಪತ್ರಕ್ಕೆ ತುರ್ತಾಗಿ ಸ್ಪಂದಿಸಿ ಈ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಗೌಡಪ್ಪ ಹೊಸಮನಿ ತಿಳಿಸಿದ್ದಾರೆ.

ಫೋಟೊ ಕ್ಯಾಪ್ಸನ್ ೦೫ ಇಂಡಿ ೦೧ : ತಾಲೂಕಿನ ಲಚ್ಯಾಣದಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆಗೆ ರಾಜ್ಯ ರೇಲ್ವೆ ಸಚಿವ ಸೋಮಣ್ಣ ಭರವಸೆ

WhatsApp Group Join Now
Telegram Group Join Now
Share This Article