ರ್ಕಾರಿ ಬಂಗಲೆ ಖಾಲಿ ಮಾಡುವಂತೆ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ನೋಟಿಸ್

Ravi Talawar
ರ್ಕಾರಿ ಬಂಗಲೆ ಖಾಲಿ ಮಾಡುವಂತೆ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ನೋಟಿಸ್
WhatsApp Group Join Now
Telegram Group Join Now

ದೆಹಲಿ : ಲೋಕಸಭೆಯ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಕೂಡಲೇ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ಈ ಮಾಹಿತಿ ನೀಡಿವೆ. ಸಾರ್ವಜನಿಕ ಆವರಣ (ಅನಧಿಕೃತ ಒತ್ತುವರಿ ತೆರವು) ಕಾಯ್ದೆಯಡಿ ಎಲ್ಲರಿಗೂ ಈ ನೋಟಿಸ್‌ಗಳನ್ನು ನೀಡಲಾಗಿದೆ.

ನಿಯಮಗಳ ಪ್ರಕಾರ, ಹಿಂದಿನ ಲೋಕಸಭೆ ವಿಸರ್ಜನೆಯಾದ ಒಂದು ತಿಂಗಳೊಳಗೆ ಮಾಜಿ ಸಂಸದರು ತಮ್ಮ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡಬೇಕು. ಇದುವರೆಗೆ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಬಂಗಲೆ ಒತ್ತುವರಿ ತೆರವು ನೋಟಿಸ್ ಜಾರಿ ಮಾಡಲಾಗಿದ್ದು, ಕೂಡಲೇ ಸರಕಾರಿ ಬಂಗಲೆಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ.

ಇದೇ ಸಮಯದಲ್ಲಿ ಇನ್ನು ಕೆಲವು ಮಾಜಿ ಸಂಸದರಿಗೆ ನೋಟಿಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಅವರು ತಮ್ಮ ಸರ್ಕಾರಿ ನಿವಾಸಗಳನ್ನು ಶೀಘ್ರದಲ್ಲೇ ಖಾಲಿ ಮಾಡದಿದ್ದರೆ, ಬಲವಂತವಾಗಿ ಹೊರಹಾಕಲು ಅಧಿಕಾರಿಗಳ ತಂಡಗಳನ್ನು ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 

WhatsApp Group Join Now
Telegram Group Join Now
Share This Article