ಉತ್ತರ ಕರ್ನಾಟಕದ ಉಡಾಳ

Ravi Talawar
ಉತ್ತರ ಕರ್ನಾಟಕದ ಉಡಾಳ
WhatsApp Group Join Now
Telegram Group Join Now
      ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ  ‘ಉಡಾಳ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
     ಉತ್ತರ ಕರ್ನಾಟಕದ ಹಿನ್ನೆಲೆ ಧ್ವನಿಯಲ್ಲಿ  ಮೂಡಿಬಂದಿರುವ
‘ಉಡಾಳ’ ಚಿತ್ರದ ಟೀಸರ್
 ಸರಿಗಮ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ.
     ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರ್ಣಗೊಳಿಸಿರುವ ‘ಉಡಾಳ’ ತೆರೆಗೆ ಬರಲು ಸಿದ್ದವಾಗಿದ್ದಾನೆ. ಇದೊಂದು ಉತ್ತರ ಕರ್ನಾಟಕ ಭಾಗದ ಚಿತ್ರವಾಗಿದ್ದು, ಇಡೀ ಚಿತ್ರೀಕರಣ ವಿಜಯಪುರದಲ್ಲೇ ನಡೆದಿದೆ.
     ಪದವಿಪೂರ್ವ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಪೃಥ್ವಿ ಶಾಮನೂರು ‘ಉಡಾಳ’ ಚಿತ್ರದ ನಾಯಕನಾಗಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ ಶ್ರೀನಿವಾಸ್ ನಾಯಕಿ. ಬಲ ರಾಜ್ವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದರ್, ಸುಮಿತ್ ಸಂಕೋಜಿ,  ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರ ತಾರಾಬಳಗವಿದೆ.
     ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಮತ್ತೆ ಈ ಚಿತ್ರಕ್ಕಾಗಿ ಹಣ ಹೂಡಿದ್ದಾರೆ.
      ಯೋಗರಾಜ್ ಭಟ್ ಅವರು ಬರೆದಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ
‘ದ್ವಾಪರ’ ಹಾಡಿನ ಖ್ಯಾತಿಯ ಜಸ್ಕರ್ಣ್ ಸಿಂಗ್, ಉತ್ತರ ಕರ್ನಾಟಕದ ಮಾಳು ನಿಫ್ನಾಳ್, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಮತ್ತು ಚೇತನ್ ಸೋಸ್ಕರವರು ಹಾಡಿದ್ದು, ಶಿವಶಂಕರ್ ನೂರಂಬಡ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕಾಂತಾರ ಖ್ಯಾತಿಯ ಅರ್ಜುನ್ ರಾಜ್, ವಿನೋದ್ ಸಾಹಸ ನಿರ್ದೇಶನ ಹಾಗೂ ಭಜರಂಗಿ ಮೋಹನ್, ರಘು ಅವರ ನೃತ್ಯ ನಿರ್ದೇಶನ ಹಾಗೂ ವೀರೇಶ್ ಪಿ‌.ಎಂ. ಸಹ ನಿರ್ದೇಶನ ‘ಉಡಾಳ’ ಚಿತ್ರಕ್ಕಿದೆ.
WhatsApp Group Join Now
Telegram Group Join Now
Share This Article