“ಮನುಷ್ಯ ಎಷ್ಟೇ ಕಷ್ಟ ಬಂದರೂ ಭಯಪಡದೆ ಧೈರ್ಯದಿಂದ ಕಷ್ಟಗಳನ್ನು ಎದುರಿಸಬೇಕು”

MK HasiruKranti
“ಮನುಷ್ಯ ಎಷ್ಟೇ ಕಷ್ಟ ಬಂದರೂ ಭಯಪಡದೆ ಧೈರ್ಯದಿಂದ ಕಷ್ಟಗಳನ್ನು ಎದುರಿಸಬೇಕು”
WhatsApp Group Join Now
Telegram Group Join Now

ಘಟಪ್ರಭಾ: ಮನುಷ್ಯನಿಗೆ ಸಮಾಜದಲ್ಲಿ ಎಷ್ಟೇ ಕಷ್ಟ ಬಂದರೂ ಭಯಪಡದೆ ಧೈರ್ಯದಿಂದ ಆ ಕಷ್ಟಗಳನ್ನು ಎದುರಿಸಬೇಕು ಧೈರ್ಯ ಎಂದರೆ ಹೋಪಡೆದಾಟಕ್ಕೆಳಿಯುವುದಿಲ್ಲ ಬುದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಲ್ಲ ಸಾಮರ್ಥ್ಯ ಒತ್ತಡದ ಪರಿಸ್ಥಿಯನ್ನು ಬಯಸುವ ತಾಕತ್ತು ಕೂಡವೇ ಧೈರ್ಯ ಆಗಿರುತ್ತದೆ ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ಪ್ರಯುಕ್ತವಾಗಿ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನದ ೫ನೇ ದಿನದಂದು ಪ್ರವಚನಕರರಾದ ಬಳೂಟಗಿಯ ಶಿವಕುಮಾರದೇವರು ಹೇಳಿದರು.
ಸಮುದ್ರದಲ್ಲಿ ಹಡುಗು ಚಲಿಸುವಾಗ ಹಡಗನ್ನು ಮುಳುಗಿಸಬೇಕೆಂದು ಗಾಳಿ ಬಿಸುತ್ತದೆ ನಾವು ಆ ಗಾಳಿಗೆ ಬಿರುಗಾಳಿಯಂದು ಕರೆಯುತ್ತೇವೆ ಹಾಗೆ ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರೂ ಸಹಿತ ಆ ಕಷ್ಟಗಳಂತ ಬಿರುಗಾಳಿಗೆ ಅಂಜದೆ ಆಳುಕದೆ ಹೆದರದೆ ಭಯಪಡದೆ ಬದುಕಿದರೆ ಆ ವ್ಯಕ್ತಿನೆ ಮಹಾಮಾನವನಾಗುತ್ತಾನೆ. ಅಂದುಕೊಂಡಿರುವ ಕೆಲಸ ಮಾಡಲು ಧೈರ್ಯ ಬೇಕು, ಧೈರ್ಯ ಬರಲು ನಂಬಿಕೆ ಇರಬೇಕು, ನಂಬಿಕೆ ಇಡಲು ಅದರ ಬಗ್ಗೆ ಸರಿಯಾದ ಜ್ಞಾನ ಇರಬೇಕು ಹಾಗೆ ಕಲ್ಯಾಣದ ಶರಣರಿಗೆ ಎಷ್ಟೇ ಕಷ್ಟಗಳು ಬಂದರೂ ಸಹಿತ ಭಯಪಡದೆ ಸಾರ್ಥಕದ ಬದುಕನ್ನು ಸಾಗಿಸಿದರು ಮನುಷ್ಯನಿಗೆ ಕಷ್ಟ ಬಂದಾಗ ಅವರ ಹೃದಯ ವಜ್ರದಷ್ಟು ಕಠಿಣವಾಗಿರಬೇಕು ದಯಾ ವಿಚಾರ ಬಂದಾಗ ಹೂವಿನಷ್ಟೇ ಮೃದುವಾಗಿರಬೇಕು ಈ ತತ್ವವನ್ನು ಕಲ್ಯಾಣದ ಶರಣರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.

 

WhatsApp Group Join Now
Telegram Group Join Now
Share This Article