ಕಾರ್ಖಾನೆ ಸ್ಥಾಪಿಸಿ ಇಲ್ಲ ನಮ್ಮ ಜಮೀನು ನಮಗೆ ಕೊಡಿ: ರೈತ ಸಂಘಗಳ ಪತ್ರ ಚಳುವಳಿ

Ravi Talawar
ಕಾರ್ಖಾನೆ ಸ್ಥಾಪಿಸಿ ಇಲ್ಲ ನಮ್ಮ ಜಮೀನು ನಮಗೆ ಕೊಡಿ: ರೈತ ಸಂಘಗಳ ಪತ್ರ ಚಳುವಳಿ
WhatsApp Group Join Now
Telegram Group Join Now
ಬಳ್ಳಾರಿ.ಜೂನ್.25 ಕಳೆದ 14 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಮತ್ತು ಕುಡುತಿನಿ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆರ್ಷಲ್ ಮಿತ್ತಲ್, ಉತ್ತ್ತಮ್ ಗಾಲ್ವಾ (ಬ್ರಾಹ್ಮಣಿ) ಏನ್.ಎಂ.ಡಿ.ಸಿ ಕಂಪನಿಗಳು ಕರ್ನಾಟಕ ರಾಜ್ಯ ಸರ್ಕಾರದ ಕೆ.ಐ.ಡಿ.ಬಿ ಮುಖಾಂತರ ಬಲವಂತವಾಗಿ ಮೋಸದ ಭೂ ಬೆಲೆಯನ್ನು ನೀಡಿ ಭೂಮಿಯನ್ನು ಖರೀದಿಸಿ ರೈತರಿಗೆ ಆನ್ಯಾಯ ಮಾಡಿದ್ದಾರೆ.
ನ್ಯಾಯಯುತವಾದ ಭೂ ಬೆಲೆಯನ್ನು ರೈತರಿಗೆ ನೀಡಬೇಕು ಆಥÀವಾ ಕಾರ್ಖಾನೆಗಳನ್ನು ಸ್ಥಾಪಿಸಿ ಭೂಮಿ ನೀಡಿದ ರೈತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಕಳದ 555 ದಿನಗಳಿಂದ ಹೋರಾಟ ನಡಿಸುತ್ತಿದ್ದೇವೆ, ಆದರೆ ಇಲ್ಲಿಯವರೆಗೆ ಸರ್ಕಾರ ಹುಸಿ ಭರವಸೆಗಳನ್ನು ನೀಡಿ ಕಾಲಹರಣ ಮಾಡುತ್ತಿದೆ, ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಸ್ತುವಾರಿ ಸಚಿವರಿಗೆ ಹಲವಾರು ಸಲ ಮನವಿ ನೀಡದರೂ ಸಹ ಯಾರೂ ಕೂಡ ನಮಗೆ ನ್ಯಾಯ ಕೊಡಿಸಲು ಮುಂದಾಗಿಲ್ಲ, ಭೂಮಿಯನ್ನು ಕಳೆದುಕೊಂಡ ನಾವು ಸಂತ್ರಸ್ತರಾಗಿದ್ದೇವೆ, ಆದಷ್ಟು ಬೇಗ ನಮಗೆ ಪುನರ್ವಸತಿ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದರು.
ಅವರು ಇಂದು ನಗರದ ಮುಖ್ಯ ಅಂಚೆ ಕಛೇರಿಯ ಅಧಿಕಾರಿಗಳಾದ ನಾಗರಾಜ್ ರವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿಯನ್ನು ನೀಡಿ ಒತ್ತಾಯಿಸಿ ಮಾತನಾಡಿ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ನ್ಯಾಯಾದಿಶರಿಗೆ ಪತ್ರ ಚಳುವಳಿ ಮಾಡಲು ತೀರ್ಮಾನಿಸಿದ್ದೇವೆ ಎಂದು ರೈತ ಮುಖಂಡರು ತಿಳಿಸಿದರು.
ಎಚ್ ಆರ್ ಗವಿಪ್ಪ ವೃತ್ತದಿಂದ ಬೆಳಗ್ಗೆ 11 ಗಂಟೆಗೆ ಮೆರವಣಿಗೆ ಮೂಲಕ ಮುಖ್ಯ ಅಂಚೆ ಕಚೇರಿ ಯಲ್ಲಿ ಪೋಸ್ಟ್ ಮಾಡಿದರು. ಈ ಪತ್ರ ಚಳುವಳಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಏPಖS )ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಅIಖಿU ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ನೀಡಿದರು. ನಂತರ ಅಂಚೆ ಕಚೇರಿ ಮುಖ್ಯ್ ಅಧಿಕಾರಿಗಳು ಬಂದು ಮನವಿ ಪತ್ರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಂಗ್ಲಿ ಸಾಬ್, ಕನಕಪ್ಪ, ಗೋಪಾಲ, ಸಂಪತ್ ಕುಮಾರ್, ಭಾವಿ ಶಿವಕುಮಾರ್, ಗೋವರ್ಧನ್‌ರೆಡ್ಡಿ ವೇಣಿವೆರಾ ಪುರ, ಧರ್ಮಣ್ಣ, ಬಸವನ ಗೌಡ ಹರಿಗಿನಡೋನಿ, ಶೇಕನ್ನ, ರಂಗರಾಜು, ಬಡಿಗೇರಿ ಹುಚ್ಚಪ್ಪ, ರಾಮು, ನಳಿನಿ ಸೇರಿದಂತೆ ಹಲವಾರು ರೈತರು ರೈತ ಮುಖಂಡರು ಭಾಗವಹಿಸಿದ್ದರು
WhatsApp Group Join Now
Telegram Group Join Now
Share This Article