ಮುಖ್ಯಾಧಿಕಾರಿ ಅಶೋಕ್ ಗೂಡಿಮನಿ ವರ್ಗಾವಣೆಗೆ ನಿತೇಶ್ ಪಟ್ಟಣ ಆಗ್ರಹ

Pratibha Boi
ಮುಖ್ಯಾಧಿಕಾರಿ ಅಶೋಕ್ ಗೂಡಿಮನಿ ವರ್ಗಾವಣೆಗೆ  ನಿತೇಶ್ ಪಟ್ಟಣ ಆಗ್ರಹ
WhatsApp Group Join Now
Telegram Group Join Now
ಅಥಣಿ:  ಅಥಣಿ ಪಟ್ಟಣದ ಪುರಸಭೆ ಮುಖ್ಯ ಅಧಿಕಾರಿ ಅಶೋಕ್ ಗುಡಿಮನಿ ಕಟೌಟ್ ನಿರ್ಮಾಣ, ಅನಧಿಕೃತ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವು ಆರೋಪಗಳ ಅವರ ಮೇಲೆ ಇರುವುದರಿಂದ ಅವರನ್ನು ಹಿನ್ನೆಲೆಯಲ್ಲಿ ತಕ್ಷಣದಿಂದ ವರ್ಗಾವಣೆ ಮಾಡಬೇಕೆಂದು ನ್ಯಾಯವಾದಿ ನಿತೇಶ ಪಟ್ಟಣ ಆರೋಪಿಸಿದರು
ಪಟ್ಟಣದ ವಿಕ್ರಂಪೂರ್ ಬಡಾವಣೆಯ ನ್ಯಾಯವಾದಿ ನಿತೇಶ್ ಪಟ್ಟಣ ಅವರ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಈಗಾಗಲೇ ಅಥಣಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಅನಧಿಕೃತ ನಾಮಫಲಕಗಳ ನಿರ್ಮಾಣ ಮತ್ತು ಅನಧಿಕೃತ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವು ಆರೋಪಗಳು ಪುರಸಭೆ ಮುಖ್ಯ ಅಧಿಕಾರಿ ಅಶೋಕ್ ಗುಡಿಮನಿ ಅವರ ಮೇಲೆ ಇದ್ದ ಬಗ್ಗೆ ಪುರಸಭೆಯ ಸದಸ್ಯರ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಂಡು ತಕ್ಷಣದಿಂದ ಮುಖ್ಯಾಧಿಕಾರಿಯವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ಇದ್ದರೂ ಇಲ್ಲಿವರೆಗೆ ಮುಖ್ಯಾಧಿಕಾರಿ ಅಶೋಕ್ ಗುಡಿಮನಿಯವರನ್ನು ವರ್ಗಾವಣೆಯನ್ನು ಮಾಡದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಂದ ಅಥಣಿ ಪುರಸಭೆ ಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ನಿಯಮಭಾಯಿರಬಾಗಿ ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿಯ ವ್ಯಾಪಾರ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಆದರೂ ಸಹ ಯಾವುದೇ ಕ್ರಮ ವಹಿಸದ ಮೇಲಾಧಿಕಾರಿಗಳ ವಿರುದ್ಧ ಅಥಣಿ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವದಾಗಿ ನ್ಯಾಯವಾದಿ ಮಿತೇಶ್ ಪಟ್ಟಣ ಎಚ್ಚರಿಕೆ ನೀಡಿದರು. ಇನ್ನು 15 ದಿನಗಳ ಒಳಗಾಗಿ ಪುರಸಭೆಯ ಮುಖ್ಯ ಅಧಿಕಾರಿ ಅಶೋಕ್ ಗುಡಿಮನಿ ಅವರನ್ನು ಅಥಣಿ ಪುರಸಭೆಯಿಂದ ವರ್ಗಾವಣೆ ಮಾಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು
WhatsApp Group Join Now
Telegram Group Join Now
Share This Article