ಬಳ್ಳಾರಿ.ಆ.07 : ನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ ಶಾಲೆ ಮತ್ತು ಕಾಲೇಜ್ ನ ಶರಣ ಸಭಾಂಗಣದಲ್ಲಿ ಡಾ.ರಾಜಶೇಖರ್ ನೀರಮಾನ್ವಿ ಒಂಡು ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ತಿಳಿಸಿದರು. ಅವರು ನಗರದ ಮರ್ಚೆಡ್ ಹೊಟೇಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಡಾ. ನೀರಮಾನ್ವಿಯವರು ಕಲ್ಯಾಣ ಕರ್ನಾಟಕ ನಾಡು ಕಂಡ ಅತ್ಯತಬ್ಧುತ ಕಥೆಗಾರರಲಿ ಒಬ್ಬರು ಅವರ ನಿಧನರಾಗಿ ಒಂದು ವರ್ಷ ಕಳೆದ ನೆನೆಪಿಗಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಎಂದ ಅವರು ಲೋಹಿಯಾ ಪ್ರಕಾಶನ ಹುಟ್ಟಿಕೊಳ್ಳಲು ಅವರ ಕತೆಗಳೇ ಕಾರಣ ಎಂದು ಈ ಸಂದರ್ಭದಲ್ಲಿ ಅವರು ಮೆಲುಕು ಹಾಕಿದರು.\
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ನಾಗಭೂಷಣ್ ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್ ಆರ್ ಸುಜಾತಾ ವಹಿಸಿಕೊಳ್ಳಲಿದ್ದಾರೆ, ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಉಪಸ್ಥಿತರಿಲಿದ್ದಾರೆ. ಬೆಳಗಿನ ಮಾತುಕತೆಯಲ್ಲಿ ರಾಜೇಂದ್ರ ಚೆನ್ನಿ ಮತ್ತು ಡಾ. ಪಿ ಭಾರತಿ ಭಾಗವಹಿಸಲಿದ್ದು, ಮದ್ಯಾಹ್ನ ಡಾ.ಅಮರೇಶ್ ನುಗಡೋಣಿ, ಡಾ ಚಿದಾನಂದಸಾಲಿ ಮತ್ತು ಸಂಜೆ ಶ್ರೀ ಚಂದ್ರಕಾಂತ್ ವಡ್ಡು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ತ್ರಿಕಾಗೋಷ್ಠಿಯಲ್ಲಿ ಡಾ.ದಸ್ತಗೀರ್ ಸಾಬ್ ದಿನ್ನಿ, ಅಜಯ್ ಬಣಕಾರ್, ವೀರೇಂದ್ರ ರಾವಿಹಾಳ್, ಪ್ರಭುದೇವ್ ಕಪ್ಪಗಲ್, ಮುದ್ದಟನೂರು ತಿಪ್ಪೇಸ್ವಾಮಿ ಸೇರಿದಂತೆ ಇತರರಿದ್ದರು.