ಬಳ್ಳಾರಿ ಮೇ 27. ತಾಲೂಕಿನ ಹಂದಿಹಾಳ್ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಮತ್ತು 14/15ನೇ ಹಣಕಾಸಿನಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರಯಾಗಿದೆ ಎಂದು ಗ್ರಾಮದ ನಿಂಗಪ್ಪ ಮತ್ತು ಇತರರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಆರ್.ಡಿ.ಪಿ.ಆರ್ ಕಾರ್ಯದರ್ಶಿ ಮತ್ತು ಆಯುಕ್ತಾಲಯ, ಬೆಂಗಳೂರು ಸೇರಿದಂತೆ ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳಲು ಲೋಕಾಯುಕ್ತಕ್ಕೂ ಸಹ ದೂರು ನೀಡಿ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿಯಿAದ ಅನಷ್ಠಾನಗೊಳ್ಳುವ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಬರದಿದ್ದರೂ ಕೆಲವರ ಹೆಸರಿನಲ್ಲಿ ಎನ್.ಎಂ.ಆರ್ ತೆಗೆದು, ಮತ್ತು ಹತ್ತೆ ಜನರನ್ನು ಇಟ್ಟುಕೊಂಡು ಪದೇ ಪದೇ ಅವರನ್ನೆ ಮೂರು ಗುಂಪುಗಳಾಗಿ ಮಾಡಿ ಕೆಲಸಕ್ಕೆ ಬಾರದಿದ್ದರೂ ಅಂತಹ ಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿ ತಿರುಗ ಅದನ್ನು ಬಿಡಿಸಿಕೊಂಡು ಅಧಿಕಾರಿಗಳು ಮತ್ತು ಇತರರು ಹಂಚಿಕೆ ಮಾಡಿಕೊಳ್ಳುವುದು, ಮತ್ತು ಒಂದೇ ಕುಟುಂಬದ ಹಲವು ಸದಸ್ಯರ ಹೆಸರಿನಲ್ಲಿ ಎನ್.ಎಂ.ಆರ್ ತೆಗೆದು ಅವರ ಖಾತೆಗೆ ಹಣ ಜಮೆ ಮಾಡಿ ಅಕ್ರಮವನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಹಂದಿಹಾಳ್ ಮತ್ತು ಗುಡದೂರಿನಲ್ಲಿ ಮೂರ್ನಾಲ್ಕು ಆರ್.ಒ. ಪ್ಲಾಂಟ್‌ಗಳಿದ್ದು ಅವುಗಳ ನಿರ್ವಹಣೆಯನ್ನು ಒಂದು ಕಂಪನಿಗೆ ನೀಡಿದ್ದರೂ, ಎರಡು ಕಂತಿನಲಿ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ದುರಸ್ತಿಗೆಂದು, ಫರ್ನಿಚರ್‌ಗೆಂದು ಮೂರು ಲಕ್ಷ ಐವತ್ತು ಸಾವಿರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಹಾಗೂ ಬಾಲಾಜಿ ಕಂಪ್ಯೂಟರ್ಸ್ಗೆ ಪ್ರಿಂಟರ್, ಝರಾಕ್ಸ್ ಮಿಷನ್‌ಗಳಿಗೆಂದು ಆರು ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಇಷ್ಟೆ ಅಲ್ಲದೆ ನಗರದ ಮಹಾಲಕ್ಷಿö್ಮ ಏಜೆನ್ಸಿಗೆ ಎಲೆಕ್ಟಿçಕ್ ಉಪಕರಣಗಳ ಖರೀದಿಗೆಂದು ಕೇವಲ ಮೂರು ತಿಂಗಳ ಅವದಿಯಲ್ಲಿ ಮೂರು ಕಂತಿನಲ್ಲಿ ಆರು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿರುತ್ತಾರೆ, ಇದನ್ನೆಲ್ಲಾ ನೋಡಿದಾಗ ಬೋಗಸ್ ಪಾವತಿ ಮತ್ತು ಬೋಗಸ್ ಬಿಲ್ಲುಗಳೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದರ ಹಿಂದೆ ಶೇಕಡಾವಾರು ಹಣವನ್ನು ಕಿಕ್‌ಬ್ಯಾಕ್ ಪಡೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರುದಾರರು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ಸಂಬAಧಿಸಿದ ಅಧಿಕಾರಿಗಳು ನಮ್ಮ ದೂರನ್ನು ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ದುರುಪಯೋಗವಾದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿದ ನೌಕರರಿಂದ ವಸೂಲಿ ಮಾಡಿ ಅವರ ವಿರುದ್ಧ ಸೂಕ್ತ ಕಾನೂನುಕ್ರಮಕೈಗೊಂಡು ಅವರನ್ನು ಕೆಲಸದಿಂದ ಅಮಾನತ್ತು ಮಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ವಿವಿರಗಳೊಂದಿಗೆ ದೂರು ನೀಡಿದರೂ ಸಹ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.