ಬಳ್ಳಾರಿ ಐಸಿಸ್‌ ಮಾಡ್ಯೂಲ್ ಪ್ರಕರಣದ ಶಂಕಿತ ಆರೋಪಿಗಳ ವಿರುದ್ಧ ಎನ್​ಐಎ ಚಾರ್ಜ್​ಶೀಟ್

Ravi Talawar
ಬಳ್ಳಾರಿ ಐಸಿಸ್‌ ಮಾಡ್ಯೂಲ್ ಪ್ರಕರಣದ ಶಂಕಿತ ಆರೋಪಿಗಳ ವಿರುದ್ಧ ಎನ್​ಐಎ ಚಾರ್ಜ್​ಶೀಟ್
WhatsApp Group Join Now
Telegram Group Join Now

ಬೆಂಗಳೂರು: ದೇಶದಲ್ಲಿ ಐಸಿಸ್ ಕಾರ್ಯಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಬಳ್ಳಾರಿ ಮಾಡ್ಯೂಲ್ ಪ್ರಕರಣದ 7 ಜನ ಶಂಕಿತ ಆರೋಪಿಗಳ ವಿರುದ್ಧ ಎನ್‌ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಸುಲೈಮಾನ್ ಅಲಿಯಾಸ್ ಮಿನಾಜ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀರ್ ಎಂ.ಡಿ.ಮಜಾಮಿಲ್, ಮಹಾರಾಷ್ಟ್ರದ ಅನಾಸ್ ಇಕ್ಬಾಲ್ ಶೇಖ್ ಮೊಹಮ್ಮದ್, ಜಾರ್ಖಂಡ್‌ನ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಆರೋಪಿತರ ವಿರುದ್ಧ ಐಪಿಸಿ, ಯುಎಪಿಎ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎನ್‌ಐಎ ಈಗ ಚಾರ್ಜ್‌ಶೀಟ್ ಸಲ್ಲಿಸಿದೆ.

ಐಸಿಸ್ ಪ್ರತ್ಯೇಕತಾವಾದಿ ಮತ್ತು ಹಿಂಸಾತ್ಮಕ ಸಿದ್ಧಾಂತದಿಂದ ಪ್ರೇರಿತರಾಗಿದ್ದ ಆರೋಪಿಗಳು 2025ರ ವೇಳೆಗೆ ದೇಶದ ಪ್ರತೀ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್ ಸಿದ್ಧಪಡಿಸುವ ಗುರಿ ಹೊಂದಿದ್ದರು. ಭಾರತೀಯ ಸೈನಿಕರು, ಪೊಲೀಸರು, ನಿರ್ದಿಷ್ಟ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸಲು ಚಿಂತನೆ ನಡೆಸಿದ್ದರು. ಬಳ್ಳಾರಿಯಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಇನ್ನು ಭಾರತ ಸರ್ಕಾರದ ವಿರುದ್ಧ ಜಿಹಾದ್, ಸ್ಫೋಟಗಳನ್ನು ನಡೆಸಲು ಸಿದ್ಧವಾಗಿದ್ದರು. ಜಿಹಾದ್ ಸಂಬಂಧಿತ ಡಿಜಿಟಲ್ ದಾಖಲೆಗಳು ಅಥವಾ ಡೇಟಾವನ್ನು ಇತರೆ ಯುವಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಆರೋಪಿಗಳ ಪೈಕಿ ಎಂ.ಡಿ ಸುಲೈಮಾನನಿಂದ ಇತರ ಆರೋಪಿಗಳು ’ಬಯಾತ್’ (ನಿಷ್ಠೆಯ ಪ್ರತಿಜ್ಞೆ) ಸ್ವೀಕರಿಸಿದ್ದರು. ಈತ ತನ್ನನ್ನು ಆರೋಪಿಗಳ ಗುಂಪಿನ ಅಮೀರ್ ಎಂದು ಘೋಷಿಸಿಕೊಂಡಿದ್ದ. ಡಿ.2023ರಲ್ಲಿ ಪ್ರಕರಣ ದಾಖಲಿಸಿಕೊಂಡು ದೇಶದಾದ್ಯಂತ ಎನ್ಐಎ ದಾಳಿ ನಡೆಸಿತ್ತು. ಆ ವೇಳೆ 7 ಜನ ಸಿಕ್ಕಿ ಬಿದ್ದಿದ್ದರು ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article