ಕನಿಷ್ಟ ೨೦೧೫ರ ವರೆಗೆ ಅನುಧಾನಕ್ಕೆ ಖಾಸಗಿ ಶಾಲೆಗಳನ್ನು ಒಳಪಡಿಸಬೇಕು : ಎನ್.ಜಿ.ಚೌಧರಿ ಮನವಿ

Hasiru Kranti
ಕನಿಷ್ಟ ೨೦೧೫ರ ವರೆಗೆ ಅನುಧಾನಕ್ಕೆ ಖಾಸಗಿ ಶಾಲೆಗಳನ್ನು ಒಳಪಡಿಸಬೇಕು : ಎನ್.ಜಿ.ಚೌಧರಿ ಮನವಿ
WhatsApp Group Join Now
Telegram Group Join Now

ಇಂಡಿ: ಅನುಧಾನ ರಹಿತ ಖಾಸಗಿ ಶಾಲಾ ಕಾಲೇಜುಗಳನ್ನು ೧೯೯೫ರಿಂದ ೨೦೦೫ರ ವರೆಗೆ ಅನುಧಾನಕ್ಕೆ ಒಳಪಡಿಸಲು ಸರಕಾರ ಆದಷ್ಟು ಬೇಗ ಕ್ರಮಕೈಗೋಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೇ ಅವರು ಹೇಳಿಕೆ ನಿಡಿದ್ದಾರೆ. ಆದರೆ ಕನಿಷ್ಟ ೨೦೧೫ರ ವರೆಗೆ ಅನುಧಾನಕ್ಕೆ ಖಾಸಗಿ ಶಾಲೆಗಳನ್ನು ಒಳಪಡಿಸಬೇಕು ಎಂದು ಶ್ರೀ ಸ್ವಾಮಿ ವೀವೆಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್.ಜಿ.ಚೌಧರಿ ಮುಖ್ಯಮಂತ್ರೀಗಳಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಫಲಿತಾಂಶ ಹೇಚ್ಚಳದಲ್ಲಿ ಸಂಸ್ಥೆಗಳ ಭೋದಕ ಸಿಬ್ಬಂದಿ ಪಾತ್ರ ಬಹಳ ಮಹತ್ವದಾಗಿದೆ. ಇದನ್ನು ಸಚಿವರು ಅರಿತ್ತು ಸಂಸ್ಥೆಗಳಿಗೆ ಅನುಕೂಲ ಮಾಡಬೇಕು. ಈಗಾಗಲೆ ನಮ್ಮ ರಾಜ್ಯಾಧ್ಯಕ್ಷರಾದ ರೇವಣಸಿದ್ದಪ್ಪ ಜಲಾದಿ ಅವರು ೧೯೯೫ರಿಂದ ಇಲ್ಲಿಯವರೆಗೆ ಎಲ್ಲ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಹಾಗೂ ಮಾನ್ಯತೆ ನವಿಕರಣ ಸರಳ ಗೋಳಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. ಅದಕ್ಕೆ ಸಚಿವರು ವಿಶೇಷ ಮುತವರ್ಜಿ ವಹಿಸಿರುವುದು ಸಂತಸ ಉಂಟುಮಾಡಿದೆ. ಮಾನ್ಯ ಮುಖ್ಯಮಂತ್ರೀಗಳು ಶೀಘ್ರದಲ್ಲಿ ನಮ್ಮ ಸಂಸ್ಥೆಗಳಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಪೋಟೊ ಕ್ಯಾಪ್ಸನ್ ೦೫ ಇಂಡಿ ೦೨: ಎನ್.ಜಿ.ಚೌಧರಿ ಅವರ ಭಾವಚಿತ್ರ.

WhatsApp Group Join Now
Telegram Group Join Now
Share This Article