ಬೀಳಗಿ- ಪಟ್ಟಣದ ಎಂಟು ಎಕರೆ ವಿಶಾಲವಾದ ಪ್ರದೇಶದಲ್ಲಿ ಒಟ್ಟು ೨೫ ಕೋಟಿ ರೂ. ವೆಚ್ಚದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ನಿರ್ಮಾಣಗೊಳ್ಳಲಿದ್ದು, ಪ್ರಸ್ತುತ ೪.೫ ಕೋಟಿ ರೂ. ವೆಚ್ಚದಲ್ಲಿ ಸುತ್ತಲು ಕಂಪೌಂಡ ನಿರ್ಮಾಣಗೊಂಡ ಬಳಿಕ ಉಳಿದ ಅನುದಾನ ಬಿಡುಗಡೆ ಮಾಡಿ ನಿರಾಶ್ರಿತರ ಕೇಂದ್ರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆಗಬೇಕೆಂದು ಶಾಸಕರು, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ. ಟಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಪರಿಹಾರ ಸಮಿತಿ ಆಶ್ರಯದಲ್ಲಿ ಸುಮಾರು ೪.೫ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬೀಳಗಿ ಪಟ್ಟಣದಲ್ಲಿ ನಿರ್ಮಾಣಗೊಳ್ಳಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಕಂಪೌAಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮೂರು ದಿನದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಉತ್ತಮ ಗುಣಮಟ್ಟದ ಮರಳು, ಸಿಮೆಂಟು, ಖಡಿ, ಕಬ್ಬಿಣ ಉಪಯೋಗಿಸಬೇಕು. ಕಳಪೆ ಕಾಮಗಾರಿಯಾದರೆ ಪೆಮೆಂಟ ಮಾಡುವದಿಲ್ಲವೆಂದು ಹೇಳಿದರು.
ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ೫ ಎಕರೆ ಭೂಮಿ ಸಾಕಾದರೆ, ಇನ್ನುಳಿದ ಮೂರು ಎಕರೆ ಪ್ರದೇಶದಲ್ಲಿ ೧ ಎಕರೆಯಲ್ಲಿ ಅರಣ್ಯೀಕರಣ ಮಾಡುವದಕ್ಕೆ, ಇನ್ನೆರಡು ಏಕರೆ ಪ್ರದೇಶವನ್ನು ಸಾರ್ವಜನಿಕರ ಅನುಕೂಲತೆಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕಿ ಪದ್ಮಜಾ ಪಾಟೀಲ, ತಹಶಿಲ್ದಾರ ವಿನೋದ ಹತ್ತಳ್ಳಿ, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟೀಮಠ, ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಸಮಾಜಕಲ್ಯಾಣ ಅಧಿಕಾರಿ ಸಿ. ಎಸ್. ಗಡ್ಡದೇವರಮಠ, ಸಿದ್ದು ಗಿರಗಾಂವಿ, ಪಡಿಯಪ್ಪ ಕರಿಗಾರ, ಅಶೋಕ ಜೋಶಿ, ಬಸವರಾಜ ಹಳ್ಳದಮನಿ, ರಾಜು ಬೋರ್ಜಿ, ಅನೀಲ ಗಚ್ಚಿನಮನಿ, ಸಿದ್ದು ಮೇಟಿ, ಸಿದ್ದು ದಳವಾಯಿ ಮತ್ತಿತರಿದ್ದರು.